

ಹುಬ್ಬಳ್ಳಿ : ಕಳೆದ 2022ರ ಏಪ್ರಿಲ್ 16ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ 150 ಜನರ ಆರೋಪಿಗಳ ಪ್ರಕರಣವನ್ನು ರಾಜ್ಯ ಸರ್ಕಾರ ಯಾವುದೇ ಆಧಾರ ಇಲ್ಲದೇ ಹಿಂಪಡೆದಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದ್ದಾರೆ.
ಬುಧವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಶಾಸಕ ಟೆಂಗಿನಕಾಯಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ರೈತರ ಪರವಾಗಿ ಆಗಲಿ, ನೀರಿಗಾಗಿ ಆಗಲಿ ಹೋರಾಟ ನಡೆಸಿರಲಿಲ್ಲ. ಆ ಪ್ರಕರಣದ ಆರೋಪಿಗಳು ವಿದ್ವಂಸಕ ಕೃತ್ಯದಲ್ಲಿ ತೊಡಗಿದ್ದರೆಂದು ಎ್ಐಆರ್ನಲ್ಲಿಯೇ ದಾಖಲಿಸಲಾಗಿದೆ ಎಂದು ದೂರಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಅಭಿಯೋಜಕ ಇಲಾಖೆಯ ಉತ್ತರ ಪಡೆದ ನಂತರ ಹಳೇ ಹುಬ್ಬಳ್ಳಿ ಗಲಭೆ ಹಿಂಪಡೆದಿದ್ದಾಗಿ ಹೇಳುತ್ತಿದ್ದಾರೆ. ಆದರೆ, ಗೃಹ ಸಚಿವಾಲಯದಿಂದ ಯಾವುದೇ ಉತ್ತರ ಪಡೆದಿಲ್ಲವೆಂದು ಅಭಿಯೋಜಕ ಇಲಾಖೆಯವರು ಹೇಳಿದ್ದಾರೆ. ಹಾಗಾದರೆ, ಈ ಪ್ರಕಣದಲ್ಲಿ ಸುಳ್ಳು ಹೇಳುತ್ತಿರುವವರು ಯಾರು ? ಎಂದು ಶಾಸಕ ಟೆಂಗಿನಕಾಯಿ ಪ್ರಶ್ನಿಸಿದರು.
ಗಲಭೆಯಲ್ಲಿ ಭಾಗಿಯಾಗಿದ್ದ ತಂಜಿಮ್ ಅಸ್ರತಿಯಾ ಎಂಬಾತ ಎನ್ಜಿಒವೊಂದನ್ನು ನಡೆಸುತ್ತಿದ್ದು, ಆತ ಪಾಕಿಸ್ತಾನ, ಬಾಂಗ್ಲಾಕ್ಕೆ ಭೇಟಿಯಾಗಿ ಸಂಟನೆ, ಪ್ರಚಾರದ ಬಗ್ಗೆ ತರಬೇತಿಯನ್ನೂ ಪಡೆದಿದ್ದನೆಂದು ಎ್ಐಆರ್ನಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ಆದರೂ, ಸರ್ಕಾರ ಮುತುರ್ವಜಿ ವಹಿಸಿ ಈ ಪ್ರಕರಣ ಹಿಂಪಡೆಯಿತು. ಈ ಟನೆಯಿಂದ ವಿದ್ವಂಸಕ ಕೃತ್ಯ ನಡೆಸುವವರಿಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿ ಉದಯಗಿರಿ ಟನೆ ನಡೆಯಿತು. ಇದೀಗ, ಹುಬ್ಬಳ್ಳಿಯಲ್ಲಿ ಅಂಗನವಾಡಿ ಆಹಾರ ಸಾಮಗ್ರಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಮುಖ ಆರೋಪಿಯನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿದರೂ ಅವರು ಬಿಡುಗಡೆಗೊಳ್ಳುತ್ತಾರೆಂಬ ಮನೋಭಾವನೆಗೆ ಪೊಲೀಸರು ಬಂದಿದ್ದಾರೆ ಎಂದರು.
ರಾಜ್ಯ ಸರ್ಕಾರದ ಈ ಕ್ರಮದಿಂದಾಗಿ ಕಾನೂನು, ಸುವ್ಯವಸ್ಥೆ ಹದಗೆಟ್ಟಂತಾಗಿದೆ. ಕ್ರಿಮಿನಲ್ಗಳನ್ನು ಸರ್ಕಾರ ಬಿಡುಗಡೆಗೊಳಿಸಲು ಏನು ಕಾರಣ ? ಎಂದು ಪ್ರಶ್ನಿಸಿದರು.