ಸರ್ಕಾರದ ಮುಂದೆ ವಿಜಯನಗರ ಜಿಲ್ಲೆ ರಚನೆ ಪ್ರಸ್ತಾಪವಿಲ್ಲ: ಶಾಸಕ ಕರುಣಾಕರ ರೆಡ್ಡಿ ಹೇಳಿಕೆ

Karunakar Reddy Harapanahalli
ಜಿ. ಕರುಣಾಕರರೆಡ್ಡಿ
Published on

ಹರಪನಹಳ್ಳಿ: ವಿಜಯನಗರ ಜಿಲ್ಲೆ (ಹೊಸಪೇಟೆ) ರಚನೆ ಪ್ರಕ್ರಿಯೆ ಸರ್ಕಾರದ ಮುಂದಿಲ್ಲ. ಜಿಲ್ಲೆ ರಚನೆ ಎಂಬುದು ಸಚಿವ ಆನಂದ ಸಿಂಗ್ ಅವರ ವೈಯಕ್ತಿಕ ಅಭಿಪ್ರಾಯ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಳೆಯಿಂದಾಗಿ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಯಾಗಿದೆ. ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ 600ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಗ್ರಾಮೀಣ ಭಾಗಕ್ಕೆ ಬಸ್‌ಗಳನ್ನು ಓಡಿಸುವ ಕುರಿತಾಗಿ ಸರ್ಕಾರದ ಗಮನಕ್ಕೆ ತಂದಿರುವೆ. ತಾಲೂಕಿನಲ್ಲಿ ತಾಡಪಾಲ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಕೃಷಿ ಸಚಿವರ ಬಳಿ ಮಾತನಾಡುವೆ ಎಂದು ತಿಳಿಸಿದರು.

ಪಾಲಕರ ಒಪ್ಪಿಗೆ ಇದ್ದರೆ ಮಾತ್ರ ಶಾಲೆಗಳನ್ನು ಆರಂಭಿಸಬೇಕು. ಇಲ್ಲವೆ ಆಂಧ್ರದ ಮಾದರಿಯಲ್ಲಿ ಟಿವಿಗಳಲ್ಲಿ ಬೋಧನೆ ವ್ಯವಸ್ಥೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಪ್ರಮುಖರಾದ ಬಾಗಳಿ ಕೊಟ್ರೇಶಪ್ಪ, ಸಣ್ಣ ಹಾಲಪ್ಪ, ಲೋಕೇಶ್, ರಾಘವೇಂದ್ರಶೆಟ್ಟಿ, ಎಂ.ಸಂತೋಷ, ಯು.ಪಿ.ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net