ಉತ್ತಮ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳು

Government schools providing good education
ಬಾದಾಮಿ ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಕುಮಾರೇಶ್ವರ ಸಭಾಭವನದಲ್ಲಿ ನಡೆದ ಪ್ರೌಢಶಾಲೆಗಳ ವಿಜಯ ಸಮೂಹಗಳ ಉದ್ಘಾಟನಾ ಸಮಾರಂಭವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟಿಸಿದರು.
Published on

ಬಾದಾಮಿ: ಸರ್ಕಾರಿ ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ನಗರದ ಶ್ರೀಮದ್ ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಕುಮಾರೇಶ್ವರ ಸಭಾಭವನದಲ್ಲಿ ನಡೆದ ಪ್ರೌಢಶಾಲೆಗಳ ವಿಜಯ ಸಮೂಹಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಕರನ್ನು ಹೊಂದಿವೆ.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗುತ್ತಿದೆ. ಶಿಕ್ಷಕರು ಕೂಡ ಅದಕ್ಕೆ ಹೊಂದಿಕೊಂಡು ಪಾಠ ಬೋಧನೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಲಿತಾಂಶ ಹೊಂದಿದ ಶಾಲೆಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು. ಎಲ್ಲ ಶಿಕ್ಷಕರು ಉತ್ತಮ ಕಾರ್ಯದ ಮೂಲಕ ಒಳ್ಳೆಯ ಲಿತಾಂಶ ಪಡೆಯಲು ಮುಂದಾಗಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನವರ ಮಾತನಾಡಿ, ಶಾಸಕರು ಶಿಕ್ಷಕರ ಮೇಲೆ ಇಟ್ಟಿರುವ ನಂಬಿಕೆಯನ್ನು ನಮ್ಮ ಶಿಕ್ಷಕ ವರ್ಗ ಖಂಡಿತವಾಗಿಯೂ ಉಳಿಸಿಕೊಳ್ಳುತ್ತದೆ ಎಂದು ಹೇಳಿದರು.

ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಕೆ. ಚಿಮ್ಮಲಗಿ, ಉಪಾಧ್ಯಕ್ಷ ಯು.ವೈ. ಬಸರಿ, ಗುಳೇದಗುಡ್ಡದ ದೇವರಾಜ ಅಡ್ಡಿ, ಕೆ.ವೈ. ಪಾಟೀಲ, ಪಿ. ಟಿ. ಬೋನಿಗೇರಿ, ಎ.ಪಿ.ಮೇಟಿ, ಎಸ್.ಎ. ಮರಿಯನ್ನವರ, ಸಂತೋಷ ಪಟ್ಟಣಶೆಟ್ಟಿ ಇದ್ದರು.

ಶಿಕ್ಷಣ ಸಂಯೋಜಕ ಹನುಮಂತರಾಜು ಸ್ವಾಗತಿಸಿದರು. ಎಸ್. ಜಿ. ಹಿರೇಮಠ ನಿರೂಪಿಸಿದರು. ಎಸ್.ವೈ. ನದಾಫ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net