ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳೇ ಲೇಸು

ilk 22-2 science
ಇಳಕಲ್ಲದ ಕಂಠಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಮೇಳವನ್ನು ಕಲ್ಯಾಣ ಕರ್ನಾಟಕ ಗಣಿ ಮಾಲೀಕರ ಸಂಘದ ಅಧ್ಯಕ್ಷ ಬಾಲನಗೌಡ ಪಾಟೀಲ ಉದ್ಘಾಟಿಸಿದರು. ವಿಜಯಕುಮಾರ್ ಹಂಚಾಟೆ, ಶಾಲೆಯ ಉಪಾಧ್ಯಕ್ಷ ಪ್ರಶಾಂತ ಹಂಚಾಟೆ, ಸಂಗಣ್ಣ ಗದ್ದಿ, ಬಸವರಾಜ ಸೂಡಿ, ಮಹಾಂತೇಶ ಗೊರಜಿನಾಳ ಇತರರಿದ್ದರು.
Published on

ಇಳಕಲ್ಲ: ಯಾವುದೇ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಈ ಶಾಸಕರ ಮಾದರಿ ಸರ್ಕಾರಿ ಶಾಲೆ ತೋರಿಸಿಕೊಟ್ಟಿದೆ ಎಂದು ಕಲ್ಯಾಣ ಕರ್ನಾಟಕ ಗಣಿ ಮಾಲೀಕರ ಸಂಘದ ಅಧ್ಯಕ್ಷ ಬಾಲನಗೌಡ ಪಾಟೀಲ ಹೇಳಿದರು.

ನಗರದ ಕಂಠಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಿಜ್ಞಾನ ಮೇಳವನ್ನು ಅಕ್ಷರ ತೇರು ಎಳೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಶಾಲೆಗಳ ಜೊತೆಗೆ ಇಲ್ಲಿನ ಈ ಶಾಲೆ ನಗರದಲ್ಲಿ ಬೆಳೆಯುತ್ತಿದೆ ಎಂದು ಹೇಳಿದರು.

ಎಸ್.ಡಿ.ಎಂ.ಸಿ ಹಿಂದಿನ ಉಪಾಧ್ಯಕ್ಷ ವಿಜಯಕುಮಾರ್ ಹಂಚಾಟೆ, ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಸಂಗಣ್ಣ ಗದ್ದಿ ಮಾತನಾಡಿದರು.

ಶಾಲೆ ಉಪಾಧ್ಯಕ್ಷ ಪ್ರಶಾಂತ ಹಂಚಾಟೆ ಅಧ್ಯಕ್ಷತೆ ವಹಿಸಿದ್ದರು.

ವೈಶಾಲಿ ಘಂಟಿ, ಮುತ್ತುರಾಜ ಬೆಂಗಳೂರು, ಮಹಾಂತೇಶ ಅಂಗಡಿ, ಸಿದ್ದಮ್ಮ ಕಲ್ಗುಡಿ, ಸಾವಿತ್ರಿ ನಾಲವಾಡದ, ಅನಸೂಯಾ ಕುರಹಟ್ಟಿ, ಶೋಧನ ಹಂಚಾಟೆ, ಬಸವರಾಜ ಸೂಡಿ, ಮಹಾಂತೇಶ ಗೊರಜಿನಾಳ, ಮುಖ್ಯಗುರು ಬಿ. ಎಂ. ಹೊರಗಿನಮಠ, ಬಿ. ಬಿ. ವಾಲಿಕಾರ, ಎಸ್. ವಿ. ಮೂಲಿಮನಿ, ಜಿ.ಎ. ಜಂಗಮಶೆಟ್ಟಿ, ಬಿ.ಎಸ್. ಬಂಡಿ, ಎ. ಪಿ. ಧೋತ್ರೆ, ಕೆ. ಬಿ. ಮಸರಕಲ್ಲ, ಎಸ್. ಎಸ್. ಧೋತ್ರೆ, ವೈ.ಎಸ್. ಚಳಗೇರಿ, ನಿರೋಷಾ ಭೋವಿ ಮತ್ತು ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net