ಸರ್ಕಾರಿ ಶಾಲೆಯಲ್ಲಿ ಐವರ ಕ್ವಾರಂಟೈನ್ ಮಾಡಲು ಆಕ್ಷೇಪಿಸಿದ ಗ್ರಾಮಸ್ಥರಿಗೆ ಪಿಎಸ್‌ಐ ಮಾಡಿದ್ದೇನು?

140520 Sarjapura Village School Quarantine
Published on

ಲಿಂಗಸುಗೂರು: ಸಮೀಪದ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನೆರೆ ರಾಜ್ಯದಿಂದ ಆಗಮಿಸಿದ ಜನರ ಕ್ವಾರಂಟೈನ್‌ಗೆ ಗ್ರಾಮಸ್ಥರು ಆಕ್ಷೇಪಿಸಿದರು. ಗೋವಾದಿಂದ ಗುರುವಾರ ಬೆಳಗ್ಗೆ ಇಬ್ಬರು ವ್ಯಕ್ತಿಗಳು ಗ್ರಾಮಕ್ಕೆ ಆಗಮಿಸಿ ಮನೆಗೆ ತೆರಳಿದ್ದರು. ಗುಳೆಯಿಂದ ಬಂದವರು ಮತ್ತು ಮನೆಯವರನ್ನೆಲ್ಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕ್ವಾರಂಟೈನ್‌ಗೆ ಅಧಿಕಾರಿಗಳು ಮುಂದಾದರು.

ಆಗ ಗ್ರಾಮದ ಕೆಲ ಯುವಕರು ಶಾಲೆಗೆ ಆಗಮಿಸಿ ಶಾಲಾ-ಕಾಲೇಜು ರಜೆ ಇರುವ ಪ್ರಯುಕ್ತ ಶಾಲಾ ಆವರಣದಲ್ಲಿ ಕ್ರೀಡೆಗಳನ್ನು ಆಡುತ್ತೇವೆ. ಶಾಲೆಯಲ್ಲಿ ಕ್ವಾರಂಟೈನ್ ಮಾಡಿದರೂ ತಮ್ಮ ಮನೆಗಳಿಗೆ ಕಳ್ಳ ಮಾರ್ಗದಿಂದ ತೆರಳುವ ಸಾಧ್ಯತೆಗಳಿವೆ. ಹೀಗಾಗಿ ಬೇರೆಡೆ ಕ್ವಾರಂಟೈನ್ ಮಾಡಬೇಕೆಂದು ಪಟ್ಟು ಹಿಡಿದರು.

ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ಸ್ಥಳಕ್ಕೆ ಆಗಮಿಸಿ, ‘ಸರ್ಕಾರಿ ಪ್ರೌಢ ಶಾಲೆಯಲ್ಲಿ ಶೌಚಗೃಹ, ಕುಡಿವ ನೀರು ವ್ಯವಸ್ಥೆ ಇರುವುದರಿಂದ ಇಲ್ಲಿಯೇ ಕ್ವಾರಂಟೈನ್ ಮಾಡಲಾಗುವುದು. ಕ್ವಾರಂಟೈನ್‌ನಲ್ಲಿರುವ ಜನರು ಗ್ರಾಮದೊಳಗೆ ಪ್ರವೇಶಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದೆಂದು’ ಮನವೊಲಿಸಿದರು. ನಂತರ ಶಾಲೆಯಲ್ಲಿ ಐವರನ್ನು ಕ್ವಾರಂಟೈನ್ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net