ಶತಾಯುಷಿ, ಬುದ್ಧಿಮಾಂದ್ಯರಿಂದ ಮತದಾನ

web 3
Published on

ಎನ್.ಆರ್.ಪುರ: ತಾಲೂಕಿನ 11 ಗ್ರಾಪಂಗಳಲ್ಲಿ ಮಂಗಳವಾರ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.

ಗುಬ್ಬಿಗಾ ಗ್ರಾಪಂ ವ್ಯಾಪ್ತಿಯ ಗುಬ್ಬಿಗಾ ಶಾಲೆ ಮತಗಟ್ಟೆ ಸಂಖ್ಯೆ 26ರಲ್ಲಿ ಶತಾಯುಷಿ ಕಲ್ಯಾಣಮ್ಮ ಹಾಗೂ ಕಾನೂರು ಗ್ರಾಪಂ ವ್ಯಾಪ್ತಿಯ ಸಂಕ್ಸೆ ಶಾಲೆ ಮತಗಟ್ಟೆ ಸಂಖ್ಯೆ 36ರಲ್ಲಿ ಸುಂದರಮ್ಮ ಅವರು ಮೊಮ್ಮಕ್ಕಳ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಅರಳಿಕೊಪ್ಪ ಗ್ರಾಮದ ಬುದ್ದಿಮಾಂದ್ಯರ ಆಶ್ರಮದಿಂದ 45 ಬುದ್ಧಿಮಾಂದ್ಯರನ್ನು ಆಶ್ರಮದ ಮುಖ್ಯಸ್ಥ ಆನಂದಸ್ವಾಮಿ ಬಾಳೆ ಗ್ರಾಪಂನ ಮೂಡಬಾಗಿಲು ಶಾಲೆ ಮತಗಟ್ಟೆಗೆ ಬಂದಿದ್ದರು. ಆದರೆ ಬುದ್ಧಿ ಮಾಂದ್ಯರಿಗೆ ನೇರವಾಗಿ ಮತದಾನ ಮಾಡಲು ಶಕ್ತವಾಗಿರಲಿಲ್ಲ. ಒಬ್ಬರೇ ಹೋಗಿ ಮತದಾನ ಮಾಡುವ ಶಕ್ತಿ ಇದ್ದ 20 ಜನರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಉಳಿದ 25 ಬುದ್ಧಿ ಮಾಂದ್ಯರು ಮತದಾನ ಮಾಡದೆ ವಾಪಸಾದರು.

ನಾಗಲಾಪುರ ಗ್ರಾಪಂನ ಪೇಟೆ ಶಾಲೆ ಮತಗಟ್ಟೆ 1ರಲ್ಲಿ ನಡೆಯಲು ಅಂಗವಿಕಲರೊಬ್ಬರು ತ್ರಿಚಕ್ರ ಸೈಕಲ್ ಮೂಲಕ ಬಂದು ಮತದಾನ ಮಾಡಿದರು. ಮಾಜಿ ಸಚಿವ ಡಿ.ಎನ್.ಜೀವರಾಜ್ ಸ್ವ ಕ್ಷೇತ್ರ ದ್ವಾರಮಕ್ಕಿ ಸಮೀಪದ ಬಡಗಬೈಲು ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ11 ರಲ್ಲಿ ಮತ ಚಲಾಯಿಸಿದರು. ಮಧ್ಯಾಹ್ನದ 3 ಗಂಟೆ ವೇಳೆಗೆ ಶೇ.60 ರಷ್ಟು ಮತದಾನವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net