ಶೋಷಿತ ಸಮುದಾಯಕ್ಕೂ ಸರ್ಕಾರಿ ಯೋಜನೆ ತಲುಪಿ

ಶ್ರವಣಬೆಳಗೊಳದ ಹೊರವಲಯದಲ್ಲಿರುವ ಕೋಟೆ ಚಂದ್ರಣ್ಣ ಫಾರಂ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳನ್ನು ಅಭಿನಂದಿಲಾಯಿತು. ಕೆ.ವಿ.ಪ್ರಭಾಕರ್, ಶ್ರೇಯಸ್ ಪಟೇಲ್, ಎಂ.ಎ.ಗೋಪಾಲಸ್ವಾಮಿ, ಶಶಾಂಕ್ ಗೋಪಾಲಸ್ವಾಮಿ ಇದ್ದರು.
ಶ್ರವಣಬೆಳಗೊಳದ ಹೊರವಲಯದಲ್ಲಿರುವ ಕೋಟೆ ಚಂದ್ರಣ್ಣ ಫಾರಂ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳನ್ನು ಅಭಿನಂದಿಲಾಯಿತು. ಕೆ.ವಿ.ಪ್ರಭಾಕರ್, ಶ್ರೇಯಸ್ ಪಟೇಲ್, ಎಂ.ಎ.ಗೋಪಾಲಸ್ವಾಮಿ, ಶಶಾಂಕ್ ಗೋಪಾಲಸ್ವಾಮಿ ಇದ್ದರು.
Published on

ಶ್ರವಣಬೆಳಗೊಳ: ಶೋಷಿತ ಮತ್ತು ತುಳಿತಕ್ಕೊಳಗಾದ ಸಮುದಾಯದವರಿಗೂ ಸರ್ಕಾರಿ ಯೋಜನೆಗಳನ್ನು ತಲುಪಿಸುಲು ದೃಢ ಸಂಕಲ್ಪ ಮಾಡಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.

ಜಿಲ್ಲೆಯಿಂದ ನೂತನವಾಗಿ ಆಯ್ಕೆಯಾದ ಯುವ ಕಾಂಗ್ರೆಸ್‌ಪದಾಧಿಕಾರಿಗಳಿಗೆ ಪಟ್ಟಣದ ಹೊರವಲಯದ ಮೇಲುಕೋಟೆ ರಸ್ತೆಯಲ್ಲಿರುವ ಕೋಟೆ ಚಂದ್ರಣ್ಣ ಫಾರಂ ಹೌಸ್‌ನಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚನ್ನರಾಯಪಟ್ಟಣ ತಾಲೂಕಿನಲ್ಲಿ ಎಂ.ಎ.ಗೋಪಾಲಸ್ವಾಮಿ ಮತ್ತು ತಂಡ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಕಾಂಗ್ರೆಸ್ ನಾಯಕರು ವಹಿಸಿರುವ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿ ಪಕ್ಷ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು. ಅಲ್ಲದೆ ಶ್ರವಣಬೆಳಗೊಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕೆ.ವಿ.ಪ್ರಭಾಕರ್, ಶ್ರೇಯಸ್ ಪಟೇಲ್, ನೂತನವಾಗಿ ಆಯ್ಕೆಯಾದ ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಶಶಾಂಕ್ ಗೋಪಾಲಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್‌ಅಧ್ಯಕ್ಷ ರಂಜಿತ್ ಗೊರೂರು, ಚನ್ನರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕೆಪಿಸಿಸಿ ಸದಸ್ಯ ಜಾವಗಲ್ ಮಂಜುನಾಥ್, ತಾಲೂಕು ಗ್ಯಾರಂಟಿ ಸದಸ್ಯ ಜನಾರ್ದನ್, ಮುಖಂಡರಾದ ಕೋಟೆ ಚಂದ್ರಣ್ಣ, ನಾಗನಹಳ್ಳಿ ಮಂಜೇಗೌಡ, ಎಸ್.ಆರ್.ರಮೇಶ್, ಎಸ್.ಕೆ.ರಾಘವೇಂದ್ರ, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net