ಸರ್ಕಾರದ ನಿಯಮದಂತೆ ಹಬ್ಬ ಆಚರಿಸಿ

14-09.MDL.02
Published on

ಮುದಗಲ್: ಹಬ್ಬಗಳು ಒಬ್ಬರಿಗೊಬ್ಬರು ಸಂತೋಷ ಹಂಚಿಕೊಳ್ಳುವ ವೇದಿಕೆಗಳಾಗಿವೆ. ಇದರಿಂದಾಗಿ ಮತ್ತೊಬ್ಬರ ಭಾವನೆಗಳನ್ನು ಕದಡುವಂತೆ ಆಗಬಾರದು ಎಂದು ಮಸ್ಕಿ ಸಿಪಿಐ ಬಾಲಚಂದ್ರ ಹೇಳಿದರು.

ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದು ಮತ್ತು ಮುಸ್ಲಿಂ ಹಬ್ಬಗಳು ಜತೆಯಾಗಿ ಬಂದಿರುವುದು ಭಾವೈಕ್ಯಕ್ಕೆ ಸಾಕ್ಷಿಯಾಗಿದೆ. ಶಾಂತಿಯುತವಾಗಿ ಹಾಗೂ ಸರ್ಕಾರದ ನಿಯಮದಂತೆ ಹಬ್ಬಗಳನ್ನು ಆಚರಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ನಾಗರಿಕರು ಸಹಕಾರ ನೀಡಬೇಕು ಎಂದರು.

ಪಿಎಸ್‌ಐ ವೆಂಕಟೇಶ ಮಾತನಾಡಿ, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ, ಧ್ವನಿವರ್ಧಕ ಬಳಕೆಗೆ ಉತ್ಸವ ಸಮಿತಿಯವರು ಠಾಣೆಯಲ್ಲಿ ಪರವಾನಗಿ ಪತ್ರ ಪಡೆದುಕೊಳ್ಳಬೇಕು. ಕಾನೂನು ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್, ಸದಸ್ಯರಾದ ಗುಂಡಪ್ಪ, ಅಮೀರಬೇಗ್ ಉಸ್ತಾದ್, ಜೆಸ್ಕಾಂ ಇಲಾಖೆಯ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net