

ಮಂಡ್ಯ: ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ವತಿಯಿಂದ ಏ.4ರಂದು ಬೆಂಗಳೂರಿನ ಪ್ರಿನ್ಸ್‌ಶೈನ್ ಅರಮನೆ ಮೈದಾನದ ಆವರಣದಲ್ಲಿ ರಾಜ್ಯಮಟ್ಟದ ಕಾರ್ಯಾಗಾರ ಮತ್ತು ಸಮಾವೇಶ ಆಯೋಜಿಸಲಾಗಿದೆ. ಜಿಲ್ಲೆಯ ನಿವೃತ್ತ ನೌಕರರು ಭಾಗವಹಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಶಿವಲಿಂಗಯ್ಯ ಮನವಿ ಮಾಡಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ನೌಕರರ ಬೇಡಿಕೆಗಳಾದ ನಗದು ರಹಿತ ಆರೋಗ್ಯ ಭಾಗ್ಯದ ಸಂಧ್ಯಾ ಕಿರಣ ಯೋಜನೆ ಅನುಷ್ಠಾನ, 70ರಿಂದ 80 ವರ್ಷದೊಳಗಿನ ನಿವೃತ್ತ ನೌಕರರು ಅವರ ಕುಟುಂಬದವರಿಗೆ ಶೇ.10ರಷ್ಟು ಪಿಂಚಣಿ ಆರ್ಥಿಕ ಸೌಲಭ್ಯ, 2022ರಿಂದ 2024ರವರೆಗೆ ನಿವೃತ್ತಿ ಹೊಂದಿದವರಿಗೆ ಪಿಂಚಣಿ ಆರ್ಥಿಕ ಸೌಲಭ್ಯ ಒದಗಿಸುವುದು. ನಿವೇಶನ ಜಿಲ್ಲಾ ಹಾಗೂ ತಾಲೂಕು ಸಂಘಗಳಿಗೆ ಉಚಿತ ನಿವೇಶನ ಒದಗಿಸುವುದು. 7ನೇ ವೇತನ ಆಯೋಗದ ಶಿಫಾರಸ್ಸಿನ ಅಂಶವನ್ನು ಯಥಾವತ್ತಾಗಿ ಜಾರಿಗೊಳಿಸುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗುವುದು. ಜಿಲ್ಲೆಯಿಂದ 8 ಬಸ್‌ನಲ್ಲಿ 400ರಿಂದ 500 ಜನ ಸರ್ಕಾರಿ ನಿವೃತ್ತ ನೌಕರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಘಟನಾ ಕಾರ್ಯದರ್ಶಿ ವೆಂಕಟೇಶ್‌ಗೌಡ, ಅಂಕೇಗೌಡ, ಬಿ.ಶಿವಲಿಂಗು ಇದ್ದರು.