

ಕುಂದಾಪುರ: ಇಲ್ಲಿನ ಸರ್ಕಾರಿ ನಿವೃತ್ತ ನೌಕರರ ಸಂಘದ ಸಭೆ ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನ ಸಭಾಭವನದಲ್ಲಿ ಭಾನುವಾರ ನಡೆಯಿತು.
ಅಧ್ಯಕ್ಷ ವಕ್ವಾಡಿ ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯತ್ವ ಸ್ವೀಕರಿಸಿದ ಅನಂತ ಅಡಿಗ ಸೌಕೂರು, ಚಂದ್ರಮತಿ ಎ.ಅಡಿಗ, ವಿಠ್ಠಲ ಕಾಮತ್, ಜನ್ಮ ದಿನ ಆಚರಿಸಿಕೊಂಡ ಜಯಲಕ್ಷ್ಮೀ ಕೊತ್ವಾಲ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯ, ನಾಟಿ ವೈದ್ಯ ಕಿರಣ್ ಕುಮಾರ್ ಅವರು ಗಿಡಮೂಲಿಕೆಗಳು, ಅವುಗಳಿಂದ ಗುಣಪಡಿಸಬಹುದಾದ ಕಾಯಿಲೆಗಳ ಕುರಿತು ಮಾಹಿತಿ ನೀಡಿದರು.
ಗೌರವಾಧ್ಯಕ್ಷ ವಕ್ವಾಡಿ ದಿನಕರ್ ಶೆಟ್ಟಿ, ಗೌರವ ಸಲಹೆಗಾರ ಸಿ.ಎಚ್.ಜಗನ್ನಾಥ ಶೆಟ್ಟಿ, ಸೂರ್ಯಕಾಂತಿ ಉಪಸ್ಥಿತರಿದ್ದರು. ಶಂಕರ ಬಿಲ್ಲವ ಕಟ್ಬೆಲ್ತೂರು ಪ್ರಾರ್ಥಿಸಿದರು. ಕಾರ್ಯದರ್ಶಿ ಪದ್ಮನಾಭ ಅಡಿಗ ಸ್ವಾಗತಿಸಿದರು. ಖಜಾಂಚಿ ಶಂಕರ ಪೂಜಾರಿ ಲೆಕ್ಕ ಪತ್ರ ಮಂಡಿಸಿದರು. ಕೃಷ್ಣಯ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.