ಜಾನಪದ ಕಲಾವಿದರಿಗೆ ಸರ್ಕಾರದ ಸ್ಪಂದನೆ

12 MDG 3
Published on

ಮುಂಡರಗಿ: ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ ನೀಡಲಾಗುತ್ತಿದೆ. ಕಲಾವಿದರು ಇದರ ಸದುಪಯೋಗ ಪಡೆಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವೀರಯ್ಯಸ್ವಾಮಿ ಸಲಹೆ ನೀಡಿದರು.

ಪಟ್ಟಣದ ಜೆ.ಎಚ್. ಪಾಟೀಲ ನಗರ ಸಭಾಂಗಣದಲ್ಲಿ ಶ್ರೀರತ್ನಾಕರ ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣ ನಗರ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಎಸ್.ಟಿ.(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ನಿರ್ದೇಶನಾಲಯದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಪದ ಸಾಂಸ್ಕೃತಿಕ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮಾಸಾಶನ ಪಡೆಯುತ್ತಿರುವ ಕಲಾವಿದರು ತಮ್ಮ ಜೀವಿತ ಪ್ರಮಾಣಪತ್ರವನ್ನು ಇಲಾಖೆಗೆ ನೀಡಬೇಕು. ನೋಂದಾಯಿತ ಸಾಂಸ್ಕೃತಿಕ ಕಲಾ ಸಂಘಗಳಿಗೆ ಆದ್ಯತೆಯ ಮೇರೆಗೆ ಪ್ರಾಯೋಜಕತ್ವ ಕಾರ್ಯಕ್ರಮವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷೆ ಶೋಭಾ ಮೇಟಿ ಮಾತನಾಡಿ, ನಮ್ಮ ನಾಡು ಪ್ರಾಚೀನ ಕಲೆಗಳ ಬೀಡು. ಹಂತಿ ಪದ, ಲಾವಣಿ ಪದ, ಸೋಬಾನೆ ಪದ, ಬೀಸುವಪದ ಮೊದಲಾದ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಎಚ್. ಗಚ್ಚಣ್ಣವರ ಮಾತನಾಡಿ, ಕಸಾಪ ಜತೆಗೆ ಸಾಂಸ್ಕೃತಿಕ ಇಲಾಖೆಯೊಂದಿಗೆ ಸಾಹಿತ್ಯ ಸಾಂಸ್ಕೃತಿಕ ಕಲೆಗಳಿಗೆ ಉತ್ತೇಜನ ನೀಡುತ್ತಿವೆ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಪ್ರಾಚೀನ ಕಲೆಗಳು ಬೆಳೆಯುಬೇಕು ಎಂದರು.

ಸಂಗೀತ, ನೃತ್ಯ, ಗಾಯನ ಕಾರ್ಯಕ್ರಮಗಳು ನೆರೆದಿದ್ದ ಜನರ ಗಮನ ಸೆಳೆದವು. ಸಂಸ್ಥೆಯ ಅಧ್ಯಕ್ಷ ಶಿವು ವಾಲಿಕಾರ, ಹನುಮಂತ ವಾಲಿಕಾರ, ದೇವು ಹಡಪದ, ಮಹಾಂತೇಶ ವಾಲಿಕಾರ, ಸುರೇಶ ಹಡಪದ, ಪ್ರಭಾವತಿ ಬೆಳವಣಿಕೆಮಠ, ದಾನಪ್ಪ ಹಡಪದ, ಲಲಿತಮ್ಮ ಹೊಸಮನಿ ಗಂಗಾಧರ ಬಳಿಗೇರ, ಲತಾ ಇಟಗಿ ಇತರರು ಇದ್ದರು. ಮಂಜುನಾಥ ಮುಧೋಳ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net