ಯರಗೇರಾ ತಾಲೂಕು ರಚೆನೆಗೆ ಸರ್ಕಾರ ಎಳ್ಳುನೀರು -10 ವರ್ಷದ ಹೋರಾಟಕ್ಕಿಲ್ಲ ಫಲ

raichur
raichur
Published on

ರಾಯಚೂರು ರಾಜ್ಯದಲ್ಲಿ ಹೊಸದಾಗಿ ತಾಲೂಕು ರಚನೆ ಮಾಡುವ ಯಾವುದೆ ಪ್ರಸ್ತಾವ ಇಲ್ಲ ಎನ್ನುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಹೇಳಿಕೆ ಯರಗೇರಾ ತಾಲೂಕು ರಚನೆ ಕನಸಿಗೆ ಭಂಗ ತಂದಿದೆ.

ಕಳೆದ ಎರಡ್ಮೂರು ವರ್ಷದಿಂದ ರಾಯಚೂರು ತಾಲೂಕಿನ ಯರಗೇರಾ ಹೋಬಳಿಯನ್ನು ನೂತನ ತಾಲೂಕು ರಚನೆಗೆ ಒತ್ತಾಯಿಸಿ ಹೋರಾಟ ನಡೆಯುತ್ತಿದೆ. ಜತೆಗೆ ಇತ್ತೀಚೆಗೆ ಬೆಂಗಳೂರಿನಲ್ಲೂ ಪ್ರತಿಭಟಿಸಿ ಸಿಎಂ, ಕಂದಾಯ ಸಚಿವರಿಗೂ ಮನವಿ ಸಲ್ಲಿಸಿ ಬಂದಿರುವ ಬೆನ್ನಲ್ಲೇ ಕಂದಾಯ ಸಚಿವರ ಸದನದೊಳಗಿನ ಈ ಹೇಳಿಕೆ ವಿಶ್ವಾಸದಲ್ಲಿದ್ದ ಹೋರಾಟಗಾರರಿಗೆ ಭ್ರಮನಿರಸನ ತಂದಂತಾಗಿದೆ.

ಯರಗೇರಾ ತಾಲೂಕು ದೂರಾ ದೂರಾ!

ವಿಧಾನಪರಿಷತ್ ಸದಸ್ಯ ಟಿ.ರಘು ಮೂರ್ತಿಯವರು ನೂತನ ತಾಲೂಕು ರಚೆನೆಯ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ’’63 ಹೊಸ ತಾಲೂಕುಗಳನ್ನು ಘೋಷಣೆ ಮಾಡಿ ಆ ಪೈಕಿ 14 ತಾಲೂಕುಗಳಿಗೆ ಮಾತ್ರ ಕಚೇರಿಗಳಿಗೆ ಭೂಮಿ ಕೊಡಲಾಗಿತ್ತು. ನಮ್ಮ ಸರ್ಕಾರ ಬಂದ ನಂತರ ಉಳಿದ 49 ತಾಲೂಕುಗಳಿಗೆ ಪ್ರಜಾ ಸೌಧ ಮಂಜೂರು ಮಾಡಲಾಗಿದೆ. ಈ ಎಲ್ಲ ಹೊಸ ತಾಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಪೂರ್ಣಗೊಳ್ಳುವ ವರೆಗೆ ಯಾವುದೇ ಹೊಸ ತಾಲೂಕು ರಚನೆ ಮಾಡದಿರಲು ಸಿಎಂ ಸೂಚಿಸಿದ್ದು, ಹಣಕಾಸು ಇಲಾಖೆ ಅಭಿಪ್ರಾಯವೂ ಇದೇ ಆಗಿದೆ. ಹಾಗಾಗಿ ಹೊಸ ತಾಲೂಕುಗಳ ಬೇಡಿಕೆಯನ್ನು ಸದ್ಯಕ್ಕೆ ಪರಿಗಣಿಸಲು ಸಾಧ್ಯವಿಲ್ಲ,’’ ಸದನದಲ್ಲಿಯೇ ತಿಳಿಸಿರುವುದರಿಂದ ಯರಗೇರಾ ತಾಲೂಕು ದೂರಾ ದೂರಾ ಎನ್ನುವಂತಾಗಿದೆ.

10 ವರ್ಷದ ಹೋರಾಟಕಿಲ್ಲ ಫಲ

ಯರಗೇರಾ ಗ್ರಾಮವು ಗ್ರಾಮಾಂತರ ಕ್ಷೇತ್ರದಲ್ಲಿ ಸುತ್ತಲಿನ 42 ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರ ಸೌಕರ್ಯ ಹೊಂದಿರುವ ಗ್ರಾಮವಾಗಿದ್ದು ತಾಲೂಕ ರಚನೆಯಾದರೆ ಜಿಲ್ಲಾ ಸ್ಥಾನದಲ್ಲಿ ಇರುವುದರಿಂದ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ, ಶಿಕ್ಷಣಾಧಿಕಾರಿ ಕಾರ್ಯಾಲಯ ಸೇರಿದಂತೆ ಅನೇಕ ಕಚೇರಿಗಳು ಕಾರ್ಯ ನಿಮಿತ್ತ ತಿಂಗಳಾನುಗಟ್ಟಲೆ ಜನರು ಅಲೆದಾಡುವ ಪರಿಸ್ಥಿತಿ ತಪ್ಪುತ್ತದೆಮದು ಕಳೆದ 10 ವರ್ಷಗಳಿಂದ ಯರಗೇರಾ ತಾಲೂಕು ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಮಾಡುತ್ತಿದ್ದು, ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೇ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿಯೂ ಹೋರಾಟ ಮಾಡಿ ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಮನವಿ ನೀಡಿದ್ದರು. ಆದರೆ ಸಚಿವರು ಹೋರಾಟಗಾರರನ್ನು ಸಮಾಧಾನಿಸಿ ಗ್ರಾಮಗಳಿಗೆ ಮರಳುವಂತೆ ಮಾಡಿದ್ದರು . ಆದರೆ ಇದೀಗ ಕಂದಾಯ ಸಚಿವರೇ ಸದನದಲ್ಲಿ ಹೇಳಿರುವಂತಹ ಹೇಳಿಕೆಯಿಂದ ಯರಗೇರಾ ತಾಲೂಕು ರಚನೆಗೆ ನಿಲುಕದ ನಕ್ಷತ್ರವಾಗಿ ಕಾಣುವಂತಿದೆ.

ಸರ್ಕಾರದದಲ್ಲಿ ಬಜೆಟ್ ಇಲ್ಲವೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಸದ್ಯಕ್ಕೆ ಯಾವುದೇ ಹೊಸ ತಾಲೂಕು ಘೋಷಣೆ ಮಾಡುವುದಿಲ್ಲವೆಂದು ಹೇಳಿದ್ದು ಬೇಸರದ ಸಂಗತಿಯಾಗಿದೆ. ನಮ್ಮ ಹೋರಾಟ ಯಾವುದೇ ಕಾರಣಕ್ಕೆ ನಾವು ನಿಲ್ಲಿಸುವುದಿಲ್ಲ. ಸದ್ಯದಲ್ಲೇ ನೂತನ ತಾಲೂಕು ಘೋಷಣೆಗೆ ಒತ್ತಾಯಿಸಿ ಯರಗೇರಾದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಂತರ ಸ್ಥಳೀಯ ಸಹಕಾರದೊಂದಿಗೆ ಅಂತ-ಅಂತದ ಹೋರಾಟ ಮಾಡಲಾಗುತ್ತದೆ.

ಮಹ್ಮದ್ ನಿಜಾಮುದ್ದೀನ್ ಪ್ರದಾನ ಸಂಚಾಲಕ ಯರಗೇರಾ ತಾಲೂಕು ಹೋರಾಟ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net