ಅಂಗವಿಕಲ ಮಕ್ಕಳಿಗೂ ಸರ್ಕಾರದಿಂದ ಸೌಲಭ್ಯ

ಕೊಳ್ಳೇಗಾಲದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ರೇಖಾ, ಎ.ಪಿ.ಶಂಕರ್, ಪರಶಿವಯ್ಯ, ಮಂ ಜುನಾಥ್, ಪ್ರಕಾಶ್, ಭಾಗ್ಯ, ಕವಿತಾ ಇತರರು ಇದ್ದರು.
ಕೊಳ್ಳೇಗಾಲದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ರೇಖಾ, ಎ.ಪಿ.ಶಂಕರ್, ಪರಶಿವಯ್ಯ, ಮಂ ಜುನಾಥ್, ಪ್ರಕಾಶ್, ಭಾಗ್ಯ, ಕವಿತಾ ಇತರರು ಇದ್ದರು.
Published on

ಕೊಳ್ಳೇಗಾಲ: ಸಾಮಾನ್ಯ ಮಕ್ಕಳಂತೆ ಅಂಗವಿಕಲ ಮಕ್ಕಳೂ ಸಹ ಶಿಕ್ಷಣ ಪಡೆಯಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯ ನೀಡುತ್ತಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ನಗರಸಭೆ ವತಿಯಿಂದ ಶುಕ್ರವಾರ ಪಟ್ಟಣದ ಸಿಡಿಎಸ್ ಭವನದಲ್ಲಿ ಆಯೋಜಿಸಿದ್ದ ಅಂಗವಿಕಲ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಗವಿಕಲ ಮಕ್ಕಳಿಗೂ ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬ ಹಂಬಲವಿರುತ್ತದೆ. ಅಂತೆಯೇ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ನಗರಸಭೆಯಿಂದ ಅಂಗವಿಕಲ ಮಕ್ಕಳಿಕೆ ಸಹಾಯಧನ ಹಾಗೂ ವಯಸ್ಕರಿಗೆ ತ್ರಿಚಕ್ರ ವಾಹನ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದು ಉನ್ನತಮಟ್ಟದ ಹುದ್ದೆ ಅಲಂಕರಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ನಗರಸಭೆ ಪೌರಾಯುಕ್ತ ಪರಶಿವಯ್ಯ, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಮಂಜುನಾಥ್, ಜಿ.ಪಿ.ಶಿವಕುಮಾರ್, ಸುಮಾ ಸುಬಣ್ಣ, ಭಾಗ್ಯಾ, ಕವಿತಾ, ರಾಘವೇಂದ್ರ, ಪ್ರಕಾಶ್, ಶಿವಮಲ್ಲು, ದೇವಾನಂದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net