ಸರ್ಕಾರಿ ಆಸ್ತಿಗಳ ಸೃಜನೆಗೆ ತಾಪಂ ಅಧಿಕಾರಿಗಳಿಗೆ ಸೂಚನೆ

Anegundi Narega Work Inspection
ಆನೆಗೊಂದಿಯಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಮಾಹಿತಿ ಶಿಕ್ಷಣ ಸಂವಹನ ಅಧಿಕಾರಿಗಳಾದ ರಿಷಲ್ ಸಿಂಗ್ ಮತ್ತು ಮೋಹಿತ್ ಶರ್ಮಾ ನೇತೃತ್ವದ ತಂಡ ಮಂಗಳವಾರ ಮಾಹಿತಿ ಪಡೆಯಿತು. ತಾಪಂ ಇಒ ಮಹಾಂತಗೌಡ ಪಾಟೀಲ್ ಇತರರಿದ್ದರು.
Published on

ಗಂಗಾವತಿ: ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಿಗಳ ತಂಡ ಮಂಗಳವಾರ ವೀಕ್ಷಿಸಿದ್ದು, ಕಡತಗಳ ಪರಿಶೀಲನೆ ನಡೆಸಿತು.

ಕೇಂದ್ರದ ಮಾಹಿತಿ ಶಿಕ್ಷಣ ಸಂವಹನ ಅಧಿಕಾರಿಗಳಾದ ರಿಷಲ್ ಸಿಂಗ್ ಮತ್ತು ಮೋಹಿತ್ ಶರ್ಮಾ ನೇತೃತ್ವದ ತಂಡ ತಾಲೂಕಿನ ಆನೆಗೊಂದಿ, ಜಂಗಮರಕಲ್ಗುಡಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿತು.

ಗ್ರಾಮೀಣ ಉದ್ಯಾನ, ಅಂತರ್ಜಲ ಹೆಚ್ಚಿಸುವ ಕಲ್ಯಾಣಿ, ಎನ್‌ಆರ್‌ಎಲ್‌ಎಂ ಸಂಜೀವಿನಿ ಶೆಡ್ ವೀಕ್ಷಿಸಿದರಲ್ಲದೆ ಬಾಳೆ ನಾರಿನಿಂದ ಬ್ಯಾಗ್, ಕ್ಯಾಪ್ ಹಾಗೂ ಅಲಂಕಾರಿಕ ವಸ್ತು ತಯಾರಿಸುವ ಸ್ವಸಹಾಯ ಸಂಘದ ಸದಸ್ಯರೊಂದಿಗೆ ಸಂವಾದ ನಡೆಸಿತು. ಜಂಗಮರ ಕಲ್ಗುಡಿ, ಹೊಸ್ಕೆರಾ ಡಗ್ಗಿ ಸಂಪರ್ಕ ರಸ್ತೆ ಬದಿಯಲ್ಲಿನ ನೆಡುತೋಪು ಕಾಮಗಾರಿ ಪರಿಶೀಲಿಸಿ ಸಮಗ್ರ ವರದಿ ಸಂಗ್ರಹಿಸಿತು.

ತಾಲೂಕಿನಲ್ಲಿ ಕೈಗೆತ್ತಿಕೊಂಡ ವಿವಿಧ ಕಾಮಗಾರಿಗಳ ಮಾಹಿತಿ ಪಡೆದುಕೊಂಡರಲ್ಲದೆ, ಕಡತಗಳ ಪರಿಶೀಲನೆ ನಡೆಸಿ, ವಿಡಿಯೋ ದಾಖಲೀಕರಣ ಮಾಡಿಕೊಂಡಿತು. ಯೋಜನೆ ಸಮರ್ಪಕ ಜಾರಿಗೊಳಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತಂಡ, ಸರ್ಕಾರಿ ಆಸ್ತಿಗಳನ್ನು ಸೃಜಿಸುವಂತೆ ತಾಪಂ ಅಧಿಕಾರಿಗಳಿಗೆ ಸೂಚಿಸಿತು.

ತಾಪಂ ಇಒ ಮಹಾಂತಗೌಡ ಪಾಟೀಲ್, ಐಇಸಿ ರಾಜ್ಯ ಸಂಯೋಜಕರಾದ ಜಿ.ಟಿ.ನಾಗೇಂದ್ರ ಕುಮಾರ್, ರಾಜೇಶ, ಜಿಲ್ಲಾ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಸಂಯೋಜಕ ಬಾಳಪ್ಪ ತಾಳಕೇರಿ, ಪಿಡಿಒ ಕೆ.ಕೃಷ್ಣಪ್ಪ, ತಾಂತ್ರಿಕ ಸಂಯೋಜಕ ಬಸವರಾಜ ಜಟಗಿ, ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆ, ಗ್ರಾಪಂ ಸಿಬ್ಬಂದಿ ಮತ್ತು ಬಿಎ್ಟಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net