

ಮಾನ್ವಿ: ಕ್ಷೇತ್ರದಲ್ಲಿನ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.
ಚಿಕ್ಕಕೊಟ್ನೆಕಲ್ ಗ್ರಾಮದಲ್ಲಿ ಮುಖ್ಯಮಂತ್ರಿ ಅನಿರ್ಬಂಧಿತ ಯೋಜನೆಯಡಿ 13.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿ ಇತರ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.
ಜನರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಚಿಕ್ಕಕೊಟ್ನೆಕಲ್ ಗ್ರಾಮ ಈ ಹಿಂದೆ ಹೇಗೆ ಇತ್ತು ಹಾಗೂ ಈಗ ಯಾವ ರೀತಿ ಅಭಿವೃದ್ಧಿ ಹೊಂದಿದೆ ಎಂಬುದನ್ನು ಗಮನಿಸಬೇಕು. ಕುಡಿಯುವ ನೀರಿನ ಸೌಲಭ್ಯ, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ ಕಟ್ಟಡ, ರಸ್ತೆ ನಿರ್ಮಾಣ, ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ, ಪ್ರಮುಖರಾದ ಸಿದ್ದಲಿಂಗಪ್ಪಗೌಡ ವಕೀಲ, ಮಹಾದೇವಪ್ಪಗೌಡ, ಅಮರಯ್ಯ ನಾಯಕ, ಪಂಪಣ್ಣ ಮ್ಯಾಕಲ್, ಜಿ.ತಾಯಣ್ಣ, ರಾಮನಗೌಡ, ಅಯ್ಯಪ್ಪ, ಲಚ್ಚುಮಯ್ಯ, ದ್ಯಾವಣ್ಣ, ನಾಗೇಶ್, ಅಧಿಕಾರಿಗಳು, ಗ್ರಾಪಂ ಸದಸ್ಯರು ಇದ್ದರು.