ಸರ್ಕಾರದ ಯೋಜನೆ ಜರಿಗೆ ತಲಪಿಸಿ

Government plan to reach the target
ಇಂಡಿ ತಾಲೂಕಿನ ಭೈರುಣಗಿ ಗ್ರಾಮದಲ್ಲಿ ನಿರ್ಮಿಸಿದ 110 ಕೆವಿ ವಿದ್ಯುತ್​ ಟಕವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. ಸಂಸದ ರಮೇಶ ಜಿಗಜಿಣಗಿ, ಜಿ.ಕೆ.ಗೋಟ್ಯಾಳ,ರಮೇಶ ವಾಲೀಕಾರ,ಎಸಿ ಅನುರಾಧಾ ವಸ್ತ್ರದ, ತಹಸೀಲ್ದಾರ್​ ಬಿ.ಎಸ್​.ಕಡಕಬಾವಿ ಇತರರಿದ್ದರು.
Published on

ಇಂಡಿ: ರೈತರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್​ ಮತ್ತು ನೀರಿನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಅಧಿಕಾರಿಗಳು ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.

ತಾಲೂಕಿನ ಭೈರುಣಗಿ&ಭತಗುಣಕಿ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿದ 110&11 ಕೆವಿ ವಿದ್ಯುತ್​ ವಿತರಣಾ ಕೇಂದ್ರ ಬುಧವಾರ ಉದ್ಘಾಟಿಸಿ ಮಾತನಾಡಿದರು.

ರೈತರ ನಾಡಿ ಮಿಡಿತ ಕಂಡ ನಾನು ನೀರಾವರಿಗೆ ಮತ್ತು ವಿದ್ಯುತ್​ ಸರಬರಾಜಿಗಾಗಿ ಶ್ರಮಿಸುತ್ತಿದ್ದೇನೆ. ಜಿಲ್ಲೆಯಲ್ಲಿಯೇ ಇಂಡಿ ತಾಲೂಕಿನಲ್ಲಿ ಹೆಚ್ಚಿನ ವಿದ್ಯುತ್​ ವಿತರಣಾ ಟಕಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇನ್ನೂ 5 ಟಕಗಳಿಗೆ ಮಂಜೂರಾತಿ ಪಡೆದುಕೊಂಡಿದ್ದು, ಶ್ರೀದಲ್ಲಿ ಕಾರ್ಯಾರಂಭ ಮಾಡಲಿವೆ ಎಂದರು.

ಇಂಡಿ ಮತ್ತು ಚಡಚಣ ಕೊನೆಯ ಭಾಗದಲ್ಲಿವೆ. ಅವುಗಳಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರು ತಲುಪಿಸಬೇಕಾದರೆ ಆಲಮಟ್ಟಿ ಅಣೆಕಟ್ಟೆ 524 ಮೀಟರ್​ ಎತ್ತರಿಸಲೇಬೇಕು. ಈ ಕಾರ್ಯಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮನವಿ ಮಾಡಿದರು.

ಸರ್ಕಾರಗಳು ಕಾವೇರಿ ನದಿಯ ನೀರಿಗೆ ನೀಡಿದಷ್ಟು ಮಹತ್ವ ಕೃಷ್ಣಾ ನದಿಯ ನೀರಿನ ಬಳಕೆಗೆ ನೀಡಿಲ್ಲ ಎಂದು ಆರೋಪಿಸಿದ ಶಾಸಕರು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಹಿಂದಿನ ಎಲ್ಲ್ಲ ಸರ್ಕಾರಗಳು ವಿಲವಾಗಿವೆ. ಇಂಡಿ ಶಾಖಾ ಕಾಲುವೆಗೆ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಕೆರೆಗೆ ನೀರು ಬಿಟ್ಟು ಅಲ್ಲಿಂದ ಮುಂದೆ ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವ ಕಾಮಗಾರಿ ಅವೈಜ್ಞಾನಿಕವಾಗಿದೆ. ಕೆರೆಯಿಂದ ಕಾಲುವೆಗೆ ಹರಿಯುವ ನೀರಿನ ವೇಗ ಕಡಿಮೆಯಾಗುತ್ತದೆ. ಇದರಿಂದ ಇಂಡಿ ತಾಲೂಕಿನ ಶಾಖಾ ಕಾಲುವೆಯ ಕೊನೆಯವರೆಗೂ ನೀರು ಹರಿಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯಲ್ಲಿ ನಿರ್ಮಾನಗೊಂಡ ಕೃಷ್ಣ್ಣ ಮೇಲಂಡೆ ಕಾಲುವೆ ಬಹಳ ಹಳೆಯದಾಗಿವೆ. ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಕಾಲುವೆಗೆ ಮರು ಜೀವ ನೀಡಬೇಕೆಂದರು.

ಬಾಗಲಕೋಟೆ ಜಿಲ್ಲೆಯ ಹೆಸ್ಕಾಂ ಮುಖ್ಯ ಇಂಜಿನಿಯರ್​ ಜಿ.ಕೆ.ಗೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ 1000 ಕೋಟಿ, ರೂ,ಗಳ ಅನುದಾನದಲ್ಲಿ ವಿಜಯಪುರ ಜಿಲ್ಲೆಯ ಹಡಗಲಿಯಲ್ಲಿ 400 ಕೆವಿ ವಿದ್ಯುತ್​ ಟಕದ ಕೆಲಸ ಪ್ರಾರಂಭವಾಗಿದೆ. ಇದು ಪೂರ್ಣಗೊಂಡರೆ ಕಡಿಮೆ ಓಲ್ಟೇಜ್​ ವಿದ್ಯುತ್​ ಸಮಸ್ಯೆ ತಪ್ಪುತ್ತದೆ ಎಂದರು.

ವಿದ್ಯುತ್​ ಕೇಂದ್ರಕ್ಕೆ ಭೂಮಿ ದಾನಮಾಡಿದ ರಮೇಶ ವಾಲೀಕಾರ, ಎಸಿ ಅನುರಾಧಾ ವಸ್ತ್ರದ, ತಹಸೀಲ್ದಾರ್​ ಬಿ.ಎಸ್​.ಕಡಕಬಾವಿ, ಇಒ ನಂದೀಶ ರಾಠೋಡ, ಭತಗುಣಕಿ ಗ್ರಾ.ಪಂ. ಅಧ್ಯ ರಾಜಶೇಖರ ಕಾಡೆ, ಅಹಿರಸಂಗ ಗ್ರಾಂ.ಪಂ. ಅಧ್ಯೆ ಶಬನಾ ಶೇಖ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ಕವಿಪ್ರನಿನಿ ಕಾರ್ಯನಿರ್ವಾಹಕ ಎಂಜಿನಿಯರ್​ ಜಗದೀಶ ಜಾಧವ, ಅಧೀಕ ಎಂಜಿನಿಯರ್​ ರಮೇಶ ಪವಾರ, ಜಾಹೀದ ಜಾಗೀರದಾರ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯ ಎಂ.ಆರ್​.ಪಾಟೀಲ, ನಿರ್ಧೇಶಕ ರೇವಗೊಂಡಪ್ಪಗೌಡ ಪಾಟೀಲ, ಇಲಿಯಾಸ್​ ಬೋರಾಮಣಿ, ಧನರಾಜ ಮುಜಗೊಂಡ ಉಪಸ್ಥಿತರಿದ್ದರು. ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net