ಸರ್ಕಾರದ ಯೋಜನೆಗಳ ತಲುಪಿಸಲು ಪ್ರಯತ್ನಿಸಿ

15 Ark 02
ಅರಕೇರಾ ತಾಲೂಕಿನ ಆಲ್ಕೋಡನಲ್ಲಿ ಅಂಗವಿಕಲರಿಗೆ ತ್ರಿಚಕ್ರ ಬೈಸಿಕಲ್, ಹೊಲಿಗೆ ಯಂತ್ರವನ್ನು ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ವಿತರಿಸಿದರು. ಉಪಾಧ್ಯಕ್ಷೆ ದೇವಮ್ಮ, ಸದಸ್ಯರಾದ ಹನುಮಂತ ಶಾವಂತಗಲ್, ಅಮರೇಶ ಕುಂಬಾರ, ರಂಗಣ್ಣ ದೊರೆ ಇತರರಿದ್ದರು.
Published on

ಅರಕೇರಾ: ತಾಲೂಕಿನ ಆಲ್ಕೋಡ ಗ್ರಾಪಂ ವತಿಯಿಂದ 15ನೇ ಹಣಕಾಸು ಯೋಜನೆಯಡಿ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ಬೈಸಿಕಲ್, ಹೊಲಿಗೆ ಯಂತ್ರ ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ಶುಕ್ರವಾರ ವಿತರಿಸಿದರು.

ಗ್ರಾಪಂ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂಗವಿಲರಿಗೆ ಅನುಕಂಪ ತೋರಿದರೆ ಸಾಲದು, ಸ್ವಾವಲಂಬಿ ಜೀವನ ನಡೆಸಲು ಸರ್ಕಾರದ ಯೋಜನೆಗಳನ್ನು ತಲುಪಿಸಲು ಪ್ರಯತ್ನಿಸಬೇಕು ಎಂದರು.

ಉಪಾಧ್ಯಕ್ಷೆ ದೇವಮ್ಮ, ಸದಸ್ಯರಾದ ಹನುಮಂತ ಶಾವಂತಗಲ್, ಅಮರೇಶ ಕುಂಬಾರ, ರಂಗಣ್ಣ ದೊರೆ, ಪರಶುರಾಮ ಆಲ್ಕೋಡ, ಪ್ರಮುಖರಾದ ನಂದಿಕೇಶ್ವರ ಪಾಟೀಲ್, ಸಾಬಣ್ಣ ಕಾವಲಿ, ಶಿವಪ್ಪ ಪ್ಯಾಟೀಗೇರಾ, ರಮೇಶ ಪ್ಯಾಟೀಗೇರಾ, ಹನುಮಂತ್ರಾಯ ಮಟ್ಟ, ಮುದುಕಪ್ಪ ಲಂಬಾಣಿ, ದುರುಗಪ್ಪ ದೊರೆ, ಪಿಡಿಒ ಮಂಜುನಾಥ ಯಾದವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net