

ಚಿಕ್ಕಮಗಳೂರು: ಹೊತ್ತಲ್ಲದ ಹೊತ್ತಲ್ಲಿ ಅಧಿಕಾರಿಯೊಬ್ಬರ ಮನೆಯಲ್ಲಿ ಪರಸ್ತ್ರೀಯೊಬ್ಬರು ಕಾಣಿಸಿಕೊಂಡಿದ್ದು, ಇದೀಗ ಆ ಅಧಿಕಾರಿಯ ನಿವಾಸದ ಮುಂದೆ ಆಕೆಯ ಪತಿ ಹಾಗೂ ಸ್ಥಳೀಯರು ಜಮಾಯಿಸಿ ಗಲಾಟೆ-ಪ್ರತಿಭಟನೆ ನಡೆಸುತ್ತಿದ್ದಾರೆ.
ಕೊಪ್ಪ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಚಂದನ್ ತನ್ನ ಕ್ವಾರ್ಟರ್ಸ್ಗೆ ಮಹಿಳೆಯೊಬ್ಬರನ್ನು ಕರೆಸಿಕೊಂಡಿದ್ದು, ಆಕೆಯ ಗಂಡ ಹಾಗೂ ಸ್ಥಳೀಯರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ನಲ್ಲಿ ಈ ಘಟನೆ ನಡೆದಿದೆ.
ಸರ್ಕಾರಿ ಅಧಿಕಾರಿಯ ನಿವಾಸದ ಎದುರು ಆ ಮಹಿಳೆಯ ಪತಿ ಹಾಗೂ ಸ್ಥಳೀಯರು ಅಧಿಕಾರಿಯ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮೂಡಿಗೆರೆಯ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಬಾಳೂರು ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸಲಾರಂಭಿಸಿದ್ದಾರೆ.