ಸರ್ಕಾರದಿಂದ ಮಕ್ಕಳಿಗೆ ನೀಡುವ ಹಾಲಿನ ಪುಡಿ ಕಾಳ ಸಂತೆಯಲ್ಲಿ ಮಾರಾಟ

illigal-milk-powder
Published on

 ಹಳಿಯಾಳ:ಶಿಕ್ಷಣ ಇಲಾಖೆಯ ಮಕ್ಕಳಗೆ ನೀಡುವ ಹಾಲಿನ ಪುಡಿ ಪ್ಯಾಕೆಟ್ ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಒಯ್ಯುತ್ತಿರುವ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮಾಲು ಸಮೇತ ಖದೀಮರನ್ನು ಹೆಡೆ ಮುರಿ ಕಟ್ಟುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶಿಕ್ಷಣ ಇಲಾಖೆಯ 1.50 ಲಕ್ಷ ರೂ. ಮೌಲ್ಯದ 791.40 ಕೆಜಿ ಹಾಲಿನ ಪುಡಿಯ ಪ್ಯಾಕೆಟ್‌ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಹಾರಾಷ್ಟ್ರ ನೋಂದಣಿ ಹೊಂದಿದ ಹಳಿಯಾಳದವರದ್ದೇ ಎನ್ನಲಾದ ಎಂಎಚ್‌ 12, ಎಚ್‌ಜೆ 5354  ವಾಹನದಲ್ಲಿ ಹಳಿಯಾಳ-ಯಲ್ಲಾಪುರ ಮಾರ್ಗವಾಗಿ ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೆರೆಗೆ  ಹಳಿಯಾಳ ಪೋಲಿಸರು ದಾಳಿ ನಡೆಸಿ ಬೆಳಗಾವಿ ಮೂಲದ ಸಂಜಯ್ ಯಶವಂತ್ ಪಾಟೀಲ್ ಎಂಬಾತನನ್ನು ಬಂಧಿಸಿದ್ದಾರೆ.‌ 

ಮೂಲಗಳ ಪ್ರಕಾರ ಬೆಳಗಾವಿ ಹಾಗೂ ಮಹಾರಾಷ್ಟ್ರದ ಕಡೆ ಈ ಹಾಲಿನ ಪುಡಿ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಮಾಹಿತಿ ಇದೆ. ಆದರೆ ಇಷ್ಟೊಂದು ಮಟ್ಟದ ಶಿಕ್ಷಣ ಇಲಾಖೆಗೆ ಸೇರಿದ ಹಾಲಿನ ಪುಡಿ ಹೇಗೆ ಖದೀಮರಿಗೆ  ದೊರೆಯಿತು?  ಅದು ಎಲ್ಲಿಯದ್ದು ಎಂಬುದು ಮಾತ್ರ ನಿಷ್ಪಕ್ಷಪಾತ ತನಿಖೆಯಿಂದಲೇ  ತಿಳಿದು ಬರಬೇಕಿದೆ.‌

ಈ ಪ್ರಕರಣದಲ್ಲಿ ಹಳಿಯಾಳದ ಓರ್ವನ ಕಿರಾಣಿ ಅಂಗಡಿ ವರ್ತಕನ‌ ಹೆಸರು ತಳುಕು ಹಾಕಿಕೊಂಡಿದ್ದು, ಇತ ಹಾಲಿನ ಪುಡಿ ಪ್ಯಾಕೆಟ್ ಮಾತ್ರವಲ್ಲದೇ ಅಕ್ಕಿ, ಬೆಳೆ ಇತರ ಆಹಾರ ವಸ್ತುಗಳನ್ನು ಕೂಡ ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಾನೆ ಎಂದು ಹೇಳಲಾಗುತ್ತಿದ್ದು ಪೋಲಿಸರ ತನಿಖೆಯಿಂದ ಹೆಚ್ಚಿನ ವಿವರಗಳು ಹೊರ ಬಿಳಬೇಕಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net