ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ!

srinivas
Published on

ಶ್ರೀನಿವಾಸಪುರ:ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದೇನೆ ಎಂದು ಕಳೆದೆರಡು ತಿಂಗಳಿನಿಂದ ಸುದ್ದಿಹಬ್ಬಿಸಲಾಗಿತ್ತು. ಆದರೆ, ಒತ್ತುವರಿ ಸಂಬಂಧಿಸಿದಂತೆ 2002ರಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಯಾವುದೇ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿಲ್ಲ. ಈ ಬಗ್ಗೆ ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಶಾಸಕ ಕೆ.ಆರ್​.ರಮೇಶ್​ಕುಮಾರ್​ ತಿಳಿಸಿದರು.

ಪಟ್ಟಣದ ಚೌಡೇಶ್ವರಿ ದೇವಾಲಯದಲ್ಲಿ ಬುಧವಾರ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿ, ಕಾಂಗ್ರೆಸ್​ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಅರಣ್ಯ ಒತ್ತುವರಿ ಸಂಬಂಧಿಸಿದಂತೆ ಇದುವರೆಗೂ ನಾಲ್ಕು ಸರ್ವೇಗಳು ನಡೆದಿದ್ದು, ಅದರಲ್ಲಿ ನಾನು ನಿರ್ದೂಷಿ ಎಂದು ೂಷಿಸಲಾಗಿದೆ. ಆದರೂ ಅರ್ಜಿದಾರರಿಗೆ ದೇವರು ಒಳ್ಳೆಯದು ಮಾಡಲಿ ಎಂದ ಅವರು, ಮುಂದಿನ ಸೋಮವಾರದಿಂದ ೇತ್ರದ ಜನತೆ ಸೇವೆಗೆ ಬರಲಿದ್ದೇನೆ. ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಇರಬೇಕು. ಯಾವುದೇ ಕಾರಣಕ್ಕೂ ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಬಾರದು ಎಂದರು.

ಪಟ್ಟಣದ ಅಮಾನಿ ಕೆರೆಯಂಗಳದಲ್ಲಿ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಮಕ್ಕಳು ಹಾಗೂ ಹಿರಿಯರಿಗೆ ಅನುಕೂಲವಾಗುವಂತೆ ಕೆಲ ಕ್ರೀಡಾ ಸಾಮಗ್ರಿ ಅಳವಡಿಕೆ, ಈಜುಕೊಳ ನಿರ್ಮಿಸುವಂತೆ ಪುರಸಭೆ ಅಧ್ಯಕ್ಷ ಬಿ.ಆರ್​.ಬಾಸ್ಕರ್​ ಅವರಿಗೆ ಕೆ.ಆರ್​.ರಮೇಶ್​ ಕುಮಾರ್​ ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಬಿ.ಆರ್​.ಭಾಸ್ಕರ್​ ಮಾತನಾಡಿ. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಕೆರೆಕಟ್ಟೆಕೆಳಗಿನ ಪಾಳ್ಯದಲ್ಲಿನ ರಸ್ತೆಗಳ ದುರಸ್ತಿ, ಸರ್ಕಾರಿ ಬಾಲಕರ ಪಿಯು ಕಾಲೇಜು ಮುಂಭಾಗದ ಪೆಟ್ಟಿಗೆ ಅಂಗಡಿ ತೆರವುಗೊಳಿಸಿ, ುಡ್​ಕೋರ್ಟ್​ ಮಾದರಿ ನಿರ್ಮಿಸಿ, ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ದಿಂಬಾಲ್​ಅಶೋಕ್​, ಪುರಸಭೆ ಕೌನ್ಸಲರ್​ರಾದ ಮುನಿರಾಜು, ಅನೀಸ್​ ಇದ್ದರು.

ಅರಣ್ಯ ಭೂಮಿ ವಿವಾದ ರಿಟ್​ ಅರ್ಜಿ ವಜಾ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಅರಣ್ಯ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಹೈಕೋರ್ಟ್​ನಲ್ಲಿ ವಕೀಲ ಕೆ.ವಿ.ಶಿವಾರೆಡ್ಡಿ ದಾಖಲಿಸಿದ್ದ, ರಿಟ್​ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಬುಧವಾರ ವಜಾಗೊಳಿಸಿದರು. ಹೈಕೋರ್ಟಿನ ನಿರ್ದೇಶನದಂತೆ ಜಂಟಿ ಸರ್ವೇ ಮುಗಿದು ವರದಿ ಸಹ ಸಂಬಂಧಪಟ್ಟ ಇಲಾಖೆಗೆ ಒಪ್ಪಿಸಲಾಗಿದ್ದು, ಸಂಬಂಧಪಟ್ಟ ಅರಣ್ಯ ಇಲಾಖಾಧಿಕಾರಿಗಳು ಪ್ರಕ್ರಿಯೆ ಶುರು ಮಾಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ವಕೀಲ ಸದಾಶಿವರೆಡ್ಡಿ ತಂದರು. ಹಾಗಾಗಿ ಪಿಟಿಷನ್​ನಲ್ಲಿ ಕೋರಲಾಗಿದ್ದ ಅಂಶಗಳನ್ನು ಪರಿಶೀಲಿಸಿರುವ ನ್ಯಾಯಮೂರ್ತಿಗಳು, ರಿಟ್​ ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net