ಮಳೆ ಕೈ ಕೊಟ್ಟರೂ ಸರ್ಕಾರ ನಿಮ್ಮೊಂದಿಗಿದೆ: ಶಾಸಕ ಗೋಪಾಲಕೃಷ್ಣ ಬೇಳೂರು

27sgr1
ಸಾಗರದ ಪಶುವೈದ್ಯಕೀಯ ಇಲಾಖೆಯಲ್ಲಿ ಮೇವು ಕಟಾವು ಯಂತ್ರವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಫಲಾನುಭವಿಗಳಿಗೆ ವಿತರಿಸಿ ಯಂತ್ರದ ಪ್ರಾತ್ಯಕ್ಷಿಕೆಯನ್ನು ಗಮನಿಸಿದರು. ಡಾ. ಎಂ.ಉಮಾದೇವಿ, ಫಲಾನುಭವಿ ಕೆ.ನಿಂಗಪ್ಪ ಇತರರಿದ್ದರು.
Published on

ಸಾಗರ: ಈ ಬಾರಿ ಬರದಿಂದ ರೈತರು ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ಭತ್ತ ಸ್ವಲ್ಪ ಬೆಳೆ ಕಂಡಿದೆ. ಜೋಳ ನೆಲಕಚ್ಚಿದೆ. ಮುಂದೆAದೂ ಬರ ಬಾರದಂತೆ ದೇವರನ್ನು ಪ್ರಾರ್ಥಿಸೋಣ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದಲ್ಲಿ ಬುಧವಾರ ಪಶುಪಾಲನಾ ಇಲಾಖೆಯಿಂದ ಆಯೋಜಿಸಿದ್ದ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ ಮತ್ತು ಉಚಿತ ಹುಲ್ಲಿನ ಬೀಜ ವಿತರಣೆ ಮಾಡಿ ಮಾತನಾಡಿ, ಸರ್ಕಾರ ರೈತರ ನೆರವಿಗೆ ನಿಂತಿದೆ. ಬರಗಾಲದ ಈ ಸಂದರ್ಭದಲ್ಲಿ ಆರ್ಥಿಕ ಸಹಕಾರ ನೀಡುತ್ತಿದೆ. ಈಗ ಬೆಳೆ ಕಟಾವಿನಿಂದ ಹಿಡಿದು ಎಲ್ಲ ಕೆಲಸಗಳಿಗೂ ಯಂತ್ರಗಳು ಬಂದಿವೆ. ರೈತರು ತಮ್ಮ ಒಕ್ಕಲುತನದಿಂದ ವಿಮುಖರಾಗಬಾರದು ಎನ್ನುವ ಹಿನ್ನೆಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಸಬ್ಸಿಡಿ ನೀಡಿ ಸಹಕರಿಸುತ್ತಿದೆ. ಸಾರ್ವಜನಿಕರು ಇರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇಬ್ಬರು ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು 16 ಸಾವಿರ ರೂ. ಸಬ್ಸಿಡಿ ಬೆಲೆಯಲ್ಲಿ ನೀಡಲಾಗಿದೆ. ಹುಲ್ಲಿನ ಬೀಜಗಳ ಉಚಿತ ಕಿಟ್‌ನ್ನು ನೀಡಿದ್ದೇವೆ. ಜಾನುವಾರುಗಳಿಗೆ ಪೋಷಕಾಂಶವಿರುವAತಹ ಹುಲ್ಲನ್ನು ನೀಡಿದರೆ ಉತ್ತಮವಾಗಿ ಹಾಲು ನೀಡುತ್ತವೆ. ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳ ಕೊಟ್ಟಿಗೆಗಳು ಜಾನುವಾರುಗಳಿಂದ ತುಂಬಿರುತ್ತಿದ್ದವು. ಈಗ ಅವೆಲ್ಲವೂ ಬರಿದಾಗುತ್ತಿದ್ದು ಗ್ರಾಮೀಣ ರೈತರು ಜಾನುವಾರುಗಳನ್ನು ಸಾಕುವ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ರೈತರು ರಾಸಾಯನಿಕ ಗೊಬ್ಬರ ಬಳಸಿ ಬೇಗ ಬೆಳೆ ಬೆಳೆದು ಲಾಭ ಮಾಡುವ ಚಿಂತನೆಯಲ್ಲಿದ್ದಾರೆ. ಇದು ದೀರ್ಘಕಾಲಕ್ಕೆ ಅಪಾಯಕಾರಿ. ಮಣ್ಣಿನ ಫಲವತ್ತತೆ ಕೊಲ್ಲುವ ರಾಸಾಯನಿಕ ಗೊಬ್ಬರಗಳಿಗಿಂತ ಸಾವಯವ ಗೊಬ್ಬರ ಬಳಸಿ ರೈತರು ಭೂಮಿಯ ಫಲವತ್ತತೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಗರಸಭಾ ಸದಸ್ಯರಾದ ಕುಸುಮಾ ಸುಬ್ಬಣ್ಣ, ಗಣಪತಿ ಮಂಡಗಳಲೆ, ಇತರರಿದ್ದರು.

ಸಾಗರಕ್ಕೂ ಬರಲಿದ್ದಾರೆ ಪಶು ವೈದ್ಯರು
ತಾಲೂಕಿನಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಪಶುವೈದ್ಯರ ನೇಮಕಾತಿ ಆಗುತ್ತಿರುವ ಹಿನ್ನೆಲೆ ಸಾಗರಕ್ಕೂ ಕೆಲ ವೈದ್ಯರ ನೇಮಕಾತಿ ಆಗಲಿದೆ ಎಂದು ಪಶುವೈದ್ಯಾಽಕಾರಿ ಡಾ.ಎಂ.ಉಮಾದೇವಿ ತಿಳಿಸಿದರು. ಪಶುಸಖಿ ಯೋಜನೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ನಮ್ಮ ಇಲಾಖೆಯ ಕೆಲಸಕ್ಕೆ ಹೆಚ್ಚಿನ ಸಹಕಾರ ದೊರೆತಿದೆ. ಸರ್ಕಾರ ಪಶುಗಳಿಗೆ ಆಂಬುಲೆನ್ಸ್ ಒಂದನ್ನು ನೀಡಿದ್ದು, ಅಪಘಾತಕ್ಕೊಳಗಾದ ಜಾನುವಾರುಗಳಿಗೆ ಕೂಡಲೇ ಶುಶ್ರೂಷೆ ಮಾಡಲು ಇದು ಸಹಕಾರಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net