ಕುಕ್ಕುಟೋದ್ಯಮಕ್ಕೆ ಸರ್ಕಾರಿದಂದ ಪ್ರೋತ್ಸಾಹ

HUN-JAN-8-4(RANGAINAKOPPALU HADI)
ಹುಣಸೂರು ತಾಲೂಕು ರಂಗಯ್ಯನಕೊಪ್ಪಲು ಹಾಡಿಯಲ್ಲಿ ಗಿರಿಜನರಿಗೆ ಗಿರಿರಾಜ ಕೋಳಿಗಳನ್ನು ವಿತರಿಸಲಾಯಿತು. ಡಾ.ಆನಂದ್ ಮಾನೇಗರ್, ಡಾ.ಚನ್ನಬಸಪ್ಪ, ಡಾ.ಗಿರೀಶ್ ಇದ್ದರು.
Published on

ಹುಣಸೂರು: ಕುಕ್ಕುಟೋದ್ಯಮ ಲಾಭದಾಯಕ ಉದ್ಯಮವಾಗಿದ್ದು, ಸ್ಥಳೀಯ ತಳಿ ಕೋಳಿಗಳ ಅಭಿವೃದ್ಧಿ ಅಗತ್ಯವಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ(ಜಿಕೆವಿಕೆ)ದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆನಂದ್ ಮಾನೇಗರ್ ಅಭಿಪ್ರಾಯಪಟ್ಟರು.

ಜಿಕೆವಿಕೆ ಬೆಂಗಳೂರು, ಕೌಶಲ್ಯಾಭಿವೃದ್ಧಿ ಕೇಂದ್ರ ಮತ್ತು ಪಶುಪಾಲನ ಮತ್ತು ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ಗಿರಿಜನ ಅಭಿವೃದ್ಧಿ ಯೋಜನೆಯಡಿ ಬುಧವಾರ ತಾಲೂಕಿನ ರಂಗಯ್ಯನಕೊಪ್ಪಲು ಹಾಡಿಯ 40ಕ್ಕೂ ಹೆಚ್ಚು ಗಿರಿಜನರಿಗೆ ಗಿರಿರಾಜ ಕೋಳಿಗಳನ್ನು ವಿತರಿಸಿ ಮಾತನಾಡಿದರು.

ಕುಕ್ಕುಟೋದ್ಯಮ ಇಂದು ಬೃಹದಾಕಾರವಾಗಿ ಬೆಳೆದಿದೆ. ಗ್ರಾಮೀಣ ಭಾಗದ ಸ್ಥಳೀಯ ತಳಿಗಳಿಗೆ ಇಂದಿಗೂ ಬೇಡಿಕೆಯಿದೆ. ರೈತರು ಹೈನುಗಾರಿಕೆಯೊಂದಿಗೆ ಕುಕ್ಕುಟ ಸಾಕಣೆ ಮಾಡುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸುವಂತಾಗಬೇಕಿದೆ. ಸರ್ಕಾರಗಳು ಕುಕ್ಕುಟೋದ್ಯಮಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಗಿರಿಜನರು ತಮ್ಮ ಜೀವನದ ಅಂಗವಾಗಿ ಕುಕ್ಕುಟ ಸಾಕಣೆ ಮಾಡಬಹುದಾಗಿದೆ ಎಂದು ಹೇಳಿದರು.

ಪಶು ಪಾಲನೆ ಮತ್ತು ಪಶುಸಂಗೋಪನಾ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಮಾತನಾಡಿ, ಹಾಡಿಯ 40 ಫಲಾನುಭವಿಗಳಿಗೆ ತಲಾ 10 ಕೋಳಿಗಳನ್ನು ವಿತರಿಸಲಾಗಿದೆ. ಕೋಳಿಗಳ ಆರೋಗ್ಯ ರಕ್ಷಣೆ ಮತ್ತು ಸಾಕಣೆ ಕುರಿತು ಇಲಾಖೆ ಮಾಹಿತಿ ಮತ್ತು ಸೌಲಭ್ಯ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿ ಗಿರೀಶ್, ಧರ್ಮಾಪು ಗ್ರಾ.ಪಂ. ಅಧ್ಯಕ್ಷ ಮಹದೇವ, ಉಪಾಧ್ಯಕ್ಷೆ ಜ್ಯೋತಿ ಮತ್ತು ಗಿರಿಜನರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net