

ಮುಂಡರಗಿ: ಶಿರಹಟ್ಟಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ. ಸೇವೆ ಮಾಡುವುದಕ್ಕೆ ನೀಡಿದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ನಿಷ್ಠೆಯಿಂದ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಭರವಸೆ ನೀಡಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಾಲೇಜ್ ಆವರಣದಲ್ಲಿ 36ನೇ ಹುಟ್ಟುಹಬ್ಬದ ಪ್ರಯುಕ್ತ ಶಾಸಕರ ಅಭಿಮಾನಿಗಳ ಬಳಗ ಹಾಗೂ ಗೆಳೆಯರ ಬಳಗದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾಧಕ ರೈತರು, ಸೈನಿಕರು, ಗುರುಗಳು, ಮಹಿಳಾ ಸಾಧಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿಶೇಷ ಸಾಧಕರಿಗೆ ಗೌರವ ಸನ್ಮಾನ ಸಮಾರಂಭ ಹಾಗೂ ಉ.ಕ.ದ ಪ್ರಸಿದ್ಧ ಜನಪದ ಕಲಾವಿದರಿಂದ ಜನಪದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕರ ಮಾದರಿಕೇಂದ್ರ ಶಾಲೆಯಲ್ಲಿ ಸರ್ಕಾರಿ ಪ್ರೌಢಶಾಲೆ ಶೀಘ್ರವೇ ಆರಂಭ ಆಗಲಿದೆ. ಬರುವ ದಿನದಲ್ಲಿ ನೀರಾವರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳವರು ಮಾತನಾಡಿ, ಶಾಸಕ ಡಾ. ಚಂದ್ರು ಲಮಾಣಿ ಅವರು ಆರೋಗ್ಯ ಶಿಬಿರ ಮಾಡಿ ಜನರಿಗೆ ಉಪಕಾರ ಮಾಡಿದ ಫಲದಿಂದ ಗೆಲುವು ಸಾಧಿಸಿದ್ದಾರೆ. ಬಡತನದಲ್ಲಿ ಬೆಳೆದು ಅಪಾರ ಸಾಧನೆ ಮಾಡಿದ್ದಾರೆ. ಚಿಂತನಾಶೀಲರಾಗಿರುವ ಇಂತಹ ಜನನಾಯಕರಿಗೆ ಒಳ್ಳೆಯದಾಗಲಿ ಎಂದರು.
ಚಿತ್ರನಟಿ ಪ್ರೇಮಾ ಮಾತನಾಡಿ, ಶಾಸಕ ಡಾ. ಚಂದ್ರು ಅವರು ಕರೊನಾ ಸಂದರ್ಭದಲ್ಲಿ ಜನರ ಸೇವೆ ಮಾಡಿದ್ದಾರೆ. ಅವರು ಸದಾ ಬಡವರಿಗೆ ಸಹಕಾರಿಯಾಗಿದ್ದಾರೆ. ಇಲ್ಲಿಗೆ ಬಂದಿರುವುದು ನನಗೆ ಖುಷಿಯಾಗಿದೆ. ನಿಮ್ಮೆಲ್ಲರ ಪ್ರೀತಿ ಎಲ್ಲ ಕಲಾವಿದರ ಮೇಲೆ ಸದಾ ಇರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿ, ಶಾಸಕ ಡಾ. ಚಂದ್ರು ಅವರು ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ಪ್ರೋತ್ಸಾಹ ನೀಡಿದರೆ ಮತ್ತಷ್ಟು ಉತ್ತಮ ಕೆಲಸ ಮಾಡುತ್ತಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿದರು. ಸಾಧಕರು, ರೈತರು, ಪ್ರತಿಭಾವಂತ ವಿದ್ಯಾರ್ಥಿಗಳು ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಜನಪದ ಕಾರ್ಯಕ್ರಮ ನಡೆಯಿತು.
ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಡಾ. ಕುಮಾರಸ್ವಾಮಿ ಹಿರೇಮಠ, ರವಿ ದಂಡಿನ, ಕರಬಸಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಎಸ್.ವಿ.ಪಾಟೀಲ, ಈಶ್ವರಪ್ಪ ಹಂಚಿನಾಳ, ಕೊಟ್ರೇಶ ಅಂಗಡಿ, ನಾಗೇಶ ಹುಬ್ಬಳ್ಳಿ, ರಮೇಶ ಹುಳಕಣ್ಣವರ, ಮಲ್ಲಿಕಾರ್ಜುನ ಹಣಜಿ, ರಜನಿಕಾಂತ ದೇಸಾಯಿ, ಶಿವಪ್ರಕಾಶ ಮಹಾಜನಶೆಟ್ಟರ, ಜ್ಯೋತಿ ಹಾನಗಲ್ಲ, ಕವಿತಾ ಉಳ್ಳಾಗಡ್ಡಿ, ಶಿವಪ್ಪ ಚಿಕ್ಕಣ್ಣವರ, ಪರಶುರಾಮ ಕರಡಿಕೊಳ್ಳ, ರುಕ್ಮಿಣಿ ಸುಣಗಾರ, ಜಾನು ಲಮಾಣಿ, ಪವಿತ್ರಾ ಕಲ್ಲಕುಟಗರ, ಕಿಟ್ಟಪ್ಪ ಮೋರನಾಳ, ಟಿ.ಬಿ. ದಂಡಿನ, ಶಿವು ಬಾರಕೇರ, ಪ್ರಹ್ಲಾದ ಹೊಸಮನಿ, ಪವನ ಮೇಟಿ, ಲಿಂಗರಾಜ ಪಾಟೀಲ, ಪ್ರಶಾಂತ ಗುಡದಪ್ಪನವರ, ಚಿನ್ನಪ್ಪ ವಡ್ಡಟ್ಟಿ, ಯಲ್ಲಪ್ಪ ಗಣಾಚಾರಿ, ಎಚ್. ವಿರೂಪಾಕ್ಷಗೌಡ್ರ, ಮೈಲಾರಪ್ಪ ಕಲಕೇರಿ, ಶಂಕರ ಮರಾಠೆ, ರಂಗಪ್ಪ ಕೋಳಿ, ಶಿವನಗೌಡ ಗೌಡರ, ಶಿವಕುಮಾರ ಕುರಿ, ರವಿ ಲಮಾಣಿ ಇತರರು ಇದ್ದರು.
ಕಸಾಪ ಪ್ರ. ಕಾರ್ಯದರ್ಶಿ ಮಂಜುನಾಥ ಮುಧೋಳ ನಿರೂಪಿಸಿದರು.