ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ರಸ್ತೆ ಕಾಮಗಾರಿಗೆ ಬಳಸುವ ಬೆಂಚಿ, ಸಿಮೆಂಟ್ ಸಂಗ್ರಹ !

Hadagali School Compund Stone Storage
ಮಿರಾಕೊರನಹಳ್ಳಿ ಗ್ರಾಮದ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗ್ರಹ ಮಾಡಿರುವ ಬೆಂಚಿ, ಸಿಮೆಂಟ್.
Published on

ಹೂವಿನಹಡಗಲಿ: ತಾಲೂಕಿನ ಮಿರಾಕೊರನಹಳ್ಳಿ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಟ್ಟಡ, ರಸ್ತೆ ಕಾಮಗಾರಿಗೆ ಬಳಸುವ ಬೆಂಚಿ, ಇತರ ಸಾಮಗ್ರಿ ಹಾಗೂ ಕೊಠಡಿಗಳಲ್ಲಿ ಸಿಮೆಂಟ್ ಚೀಲಗಳನ್ನು ಹಾಕಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಶಾಲೆಯಲ್ಲಿ ಗುತ್ತಿಗೆದಾರರು ಸಿಮೆಂಟ್, ಬೆಂಚಿಗಳನ್ನು ಸಂಗ್ರಹ ಮಾಡಿದ್ದು, ಶಾಲೆ ಆರಂಭವಾದರೆ ಸಮಸ್ಯೆಯಾಗಲಿದೆ. ಮುಖ್ಯಶಿಕ್ಷಕರ ನಿರ್ಲಕ್ಷೃದಿಂದ ಕೊಠಡಿಗಳಲ್ಲಿ ಸಿಮೆಂಟ್ ಚೀಲಗಳನ್ನು ಹಾಕಿದ್ದಾರೆ. ಈ ಕುರಿತು ಹಲವಾರು ಬಾರಿ ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಎಲ್ಲ ಸಾಮಗ್ರಿ ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮಿರಾಕೊರನಹಳ್ಳಿಯ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಂಗ್ರಹಿಸಿರುವ ಸಾಮಗ್ರಿಗಳ ಬಗ್ಗೆ ಕಾರಣ ಕೇಳಿ ಮುಖ್ಯಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. | ಸಿ.ನಾಗರಾಜ್, ಬಿಇಒ, ಹೂವಿನಹಡಗಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net