ಸರ್ಕಾರ ಪೂರ್ಣಾವಧಿ ಕೆಲಸ ನೀಡಲಿ

18 gvt 03
ಗಂಗಾವತಿ ಕಸಾಪ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಲೇಬರ್ ರೈಟ್ ೆರಂ ಮತ್ತು ಗೃಹರಕ್ಷಕ ಪೋಷಕರ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಪಾವಗಡ ಶ್ರೀರಾಮ್ ಮಾತನಾಡಿದರು. ಜಿಲ್ಲಾಧ್ಯಕ್ಷ ಬಿ.ರಾಮಪ್ಪ, ಪದಾಧಿಕಾರಿಗಳಾದ ಎಸ್.ಮೀರಾಸಾಬ್, ತಿಮ್ಮಣ್ಣ, ಸಂಗಪ್ಪ, ಸಂಜಯಕುಮಾರ, ಎಸ್. ಚಂದ್ರಪ್ಪ, ಗಿರಿಮಲ್ಲಪ್ಪ, ಮೌನೇಶ, ರಾಮಲಿಂಗಪ್ಪ, ಗೋಪಾಲಶಾಸಿ, ಅಶೋಕ ಕುರುಗೋಡ ನಾಗರಾಜ, ಕಂಚಿ ಮಲ್ಲಪ್ಪ ಇತರರಿದ್ದರು.
Published on

ಗಂಗಾವತಿ: ಜೀವನ ಭದ್ರತೆಯಿಲ್ಲದೇ ದುಡಿಯುತ್ತಿರುವ ಗೃಹರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನಿಯೋಜಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕಿದೆ ಎಂದು ಲೇಬರ್ ರೈಟ್ ೆರಂ ಮತ್ತು ಗೃಹರಕ್ಷಕ ಪೋಷಕರ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಪಾವಗಡ ಶ್ರೀರಾಮ್ ಹೇಳಿದರು.

ನಗರದ ಕಸಾಪ ಭವನದಲ್ಲಿ ಸ್ಥಳೀಯ ಗೃಹರಕ್ಷಕದಳದಿಂದ ಸೋಮವಾರ ಹಮ್ಮಿಕೊಂಡಿದ್ದ ಗೃಹರಕ್ಷಕರ ಮತ್ತು ಪೋಷಕರ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 25, 882 ಗೃಹರಕ್ಷಕರಿದ್ದು, 426 ಘಟಕಗಳಲ್ಲಿ ಜೀವನ ಭದ್ರತೆಯಿಲ್ಲದೇ ದುಡಿಯುತ್ತಿದ್ದಾರೆ.

ಚುನಾವಣೆ, ಸರ್ಕಾರಿ ತುರ್ತು ಕಾರ್ಯಕ್ರಮ, ರಾಷ್ಟ್ರೀಯ ಮತ್ತು ನಾಡಹಬ್ಬ ಸೇರಿ ವರ್ಷದಲ್ಲಿ 3 ತಿಂಗಳ ಮಾತ್ರ ಕೆಲಸ ಸಿಗುತ್ತಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ನಿರುದ್ಯೋಗಿ ಪದವೀಧರರು ಗೃಹರಕ್ಷಕ ದಳದಲ್ಲಿದ್ದಾರೆ. ವರ್ಷದ 365 ದಿನ ಕೆಲಸ ನೀಡುವುದರ ಜತೆಗೆ ಜೀವನ ಭದ್ರತೆ ಕಾಯ್ದೆ ರೂಪಿಸುವಂತೆ ಒತ್ತಾಯಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಬಿ.ರಾಮಪ್ಪ ಮಾತನಾಡಿ, ಗಹರಕ್ಷಕ ಕುಟುಂಬಗಳ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೂ ಪರದಾಡುವಂತ ಸ್ಥಿತಿ ಬಂದಿದೆ. ಆಂಧ್ರ ಮತ್ತು ತೆಲಂಗಾಣದಂತೆ ಇಲ್ಲಿಯೂ ಪೂರ್ಣಾವಧಿ ಕೆಲಸ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net