ಸರ್ಕಾರ ರೈತರ ನೆರವಿಗೆ ಧಾವಿಸಲಿ

09 KAMPLI 03
ಕಂಪ್ಲಿ ತಾಲೂಕು ಮೆಟ್ರಿ ಗ್ರಾಮದಲ್ಲಿ ಬನ್ನಿ ಮಹಾಂಕಾಳಿ ಪ್ರತಿಮೆ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಹರಗಿನಡೋಣಿ ಪಂಚವಣಿಗೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತುಲಾಭಾರ ನಡೆಯಿತು. ಪ್ರಮುಖರಾದ ಗಿರೆಡ್ಡಿ ಲಿಂಗಾರೆಡ್ಡಿ, ಎಚ್.ಎಂ.ವಿಶ್ವೇಶ್ವರಯ್ಯ ಇತರರಿದ್ದರು.
Published on

ಕಂಪ್ಲಿ: ರೈತರು ಚಂದ ಇದ್ದರೆ ಎಲ್ಲರ ಬದುಕು ಚಂದ ಇರುತ್ತದೆ ಎಂದು ಹರಗಿನಡೋಣಿ ಪಂಚವಣಿಗೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಶುಕ್ರವಾರ ನಡೆದ ಬನ್ನಿ ಮಹಾಂಕಾಳಿ ದೇವಸ್ಥಾನ ಉದ್ಘಾಟನೆ ಮತ್ತು ಪ್ರತಿಮೆ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರ ಬೆಳೆಗೆ ಬೆಲೆ ಕುಸಿದಾಗ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ರೈತರಿಗೆ ಅನ್ಯಾಯ, ನಷ್ಟವಾಗದಂತೆ ಸರ್ಕಾರ ನಿಗಾ ವಹಿಸಬೇಕು. ಆಧುನೀಕತೆ ಬದುಕಿನ ಜಂಜಾಟದಲ್ಲಿ ಧರ್ಮ, ಆಚಾರ ವಿಚಾರಗಳಿಂದ ವಿಮುಖರಾಗಬಾರದು ಎಂದರು.

ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ವಾಸ್ತುಪೂಜೆ, ಮಹಾಪೂರ್ಣಾಹುತಿ, ಕುಂಬಾಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಮೇ 7ರಿಂದ ಮೇ 9ರವರೆಗೆ ವೇದಬ್ರಹ್ಮ ರವಿಚಂದ್ರ ಆಚಾರ್ಯರ ಪೌರೋಹಿತ್ಯದಲ್ಲಿ ನಡೆದವು. ಶಾಸಕ ಜೆ.ಎನ್.ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಬಿ.ಎಂ.ವೃಷಬೇಂದ್ರಯ್ಯಸ್ವಾಮಿ, ಎಚ್.ಎಂ.ವಿಶ್ವೇಶ್ವರಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net