

ಲಿಂಗದಹಳ್ಳಿ: ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಶಾಸಕರ ಜನಸಂಪರ್ಕ ಕಚೇರಿ ಸಿಬ್ಬಂದಿಗಳೇ ಗ್ರಾಮ ಪಂಚಾಯಿತಿ ಮಟ್ಟಕ್ಕೆ ತೆರಳಿ ಅರ್ಹರಿಗೆ ಈ ಸೌಲಭ್ಯ ಸಿಗುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದು ತರೀಕೆರೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ಹೇಳಿದರು.
ತಿಗಡ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಆಂದೋಲನ ಪಿಂಚಣಿ ಆದಾಲತ್ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಅನೇಕ ಜನರು ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದು , ಅವರಿಗೆ ಈ ಯೋಜನೆ ಮೂಲಕ ಮನೆ ಬಾಗಿಲಿನಲ್ಲಿಯೇ ಸಾಮಾಜಿಕ ಭದ್ರತಾ ಯೋಜನೆ ಮಾಶಾಸನ ಮಾಡಿಸಿಕೊಡಲಾಗುವುದು ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗುವುದು ಎಂದು ತಿಳಿಸಿದರು.
ರಚನಾ ಶ್ರೀನಿವಾಸ್, ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್, ಉಪಾಧ್ಯಕ್ಷ ಆರ್. ಮುರುಗ, ಪಿಡಿಒ ಶಿವಮೂರ್ತಿ, ಕಾರ್ಯದರ್ಶಿ ಗಂಗಣ್ಣ, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಅಬುಬಕರ್ ಕುಟ್ಟಿ, ಮತ್ತು ಸಿಬ್ಬಂದಿ ಸತೀಶ, ಆರ್.ಗಗನ್ ಇದ್ದರು.