

ಲಿಂಗದಹಳ್ಳಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಮತ್ತು ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಗಡ ಗ್ರಾಮ ಪಂಚಾಯಿತಿ ಪಿಡಿಒ ಟಿ.ಶಿವಮೂರ್ತಿ ಹೇಳಿದರು.
ತಿಗಡ ಗ್ರಾಮ ಪಂಚಾಯಿಂತಿದ ರೂಪ್‌ಲೈನ್ ಗ್ರಾಮದ ಶಾಲೆಯಲ್ಲಿ ನಡೆದ ಪಂಚಾಯಿತಿ ಕಟ್ಟೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಗಳಲ್ಲಿ ಆಗಬೇಕಾಗಿರುವ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು ಮುಂತಾದ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳುವ ಜತೆಗೆ ನಿವೇಶನ ರಹಿತರು ವಸತಿ ರಹಿತರು ವಿವಿಧ ವಸತಿ ಯೋಜನೆಗಳ ಮೂಲಕ ವಸತಿಗಳ ನಿರ್ಮಾಣ ಹಾಗೂ ಸರ್ಕಾರದ ಮಾಶಾಸನಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಿಗಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಸುದೀಪ್, ಗ್ರಾಪಂ ಸಿಬ್ಬಂದಿ ಆರ್.ಸತೀಶ, ಆರ್.ಗಗನ್, ಹಾಗೂ ರೂಪ್‌ಲೈನ್, ಮಂಚೇತವರು ಮುಂತಾದ ಗ್ರಾಮಗಳ ಗ್ರಾಮಸ್ಥರು ಇದ್ದರು.