ಸರ್ಕಾರಿ ಸೌಲಭ್ಯ ಅರ್ಹರಿಗೆ ತಲುಪಲಿ

21RAM2
Published on

ರಾಮದುರ್ಗ: ಮಕ್ಕಳ ಹಾಗೂ ಮಹಿಳೆಯರ ಆರೋಗ್ಯ ಕಾಳಜಿಗೆ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಹಲವು ಸೌಲಭ್ಯ ಒದಗಿಸುತ್ತಿದೆ. ಅಂಗನವಾಡಿ ನೌಕರರು ಹಾಗೂ ಇಲಾಖೆ ಸಿಬ್ಬಂದಿ ಅವುಗಳ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ ಕರೆ ನೀಡಿದರು.

ತಾಲೂಕಿನ ಗೊಡಚಿ ಗ್ರಾಮದಲ್ಲಿ ಶನಿವಾರ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಶಿಶು ಅಭಿವದ್ಧಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಸಮರ್ಪಕ ಅನುಷ್ಠಾನಗೊಳಿಸಬೇಕು ಎಂದರು.

ಗ್ರಾಪಂ ಅಧ್ಯೆ ಲಕ್ಕವ್ವ ವಗ್ಗರ, ಸದಸ್ಯರಾದ ಈರಪ್ಪ ಗೊವರ, ಸಂಗಪ್ಪ ಪಾಕನಟ್ಟಿ, ಶಿವನಗೌಡ ಪಾಟೀಲ, ಈರಣ್ಣ ಕಾಮನ್ನವರ, ಗುರುಬಾಯಿ ಪೂಜೇರ, ಗಂಗವ್ವ ಮಾಕಾಳಿ, ಗಂಗವ್ವ ಹಾದಿಮನಿ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಜಿ.ಬಿ. ರಂಗನಗೌಡ್ರ, ಮಹಾಂತೇಶ ತಳವಾರ, ಈರಪ್ಪ ಗುಡೆನ್ನವರ, ಕಾಶಪ್ಪಗೌಡ ಪಾಟೀಲ, ಶಿಶು ಅಭಿವದ್ಧಿ ಅಧಿಕಾರಿ ಶಂಕರ ಕಂಬಾರ, ಪಂಚಾಯತ್​ ರಾಜ್​ ಇಲಾಖೆಯ ಎಇಇ ಎಂ.ಡಿ. ಈಜಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net