ಛಾಯಾಗ್ರಾಹಕರಿಗೆ ಸಿಗುವಂತಾಗಲಿ ಸರ್ಕಾರಿ ಸೌಲಭ್ಯ

PHOTOGRAPHER
Published on

ಮುಂಡರಗಿ: ಸರ್ಕಾರವು ಛಾಯಾಗ್ರಹಕರನ್ನು ಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸುವ ಮೂಲಕ ಸರ್ಕಾರದ ಯೋಜನೆ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಗದಗ ಹಿರಿಯ ಛಾಯಾಗ್ರಾಹಕ ಎಸ್.ಎಸ್.ಗೌಡರ ಹೇಳಿದರು.

ಪಟ್ಟಣದಲ್ಲಿ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸಂಘದ 12ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಛಾಯಾಗ್ರಾಹಕರು ಶಿಸ್ತಿನ ಪರಿಪಾಲಕರಾಗಿದ್ದಾರೆ. ಸಮಯಕ್ಕೆ ಮಹತ್ವ ಕೊಟ್ಟು ವೃತ್ತಿಯನ್ನು ನಿರ್ವಹಿಸುತ್ತಾರೆ. ವೃತ್ತಿಯೊಂದಿಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ತ್ಯಾಮಾನವರ ಮಾತನಾಡಿ, ಹಿರಿಯ ಛಾಯಾಗ್ರಾಹಕರಿಗೆ ಸರ್ಕಾರದಿಂದ ಗೌರವಧನ ಸಹಾಯ ಸಿಗುವಂತಾಗಬೇಕು ಎಂದರು.

ಹಿರಿಯ ಛಾಯಾಗ್ರಾಹಕ ಬಿ.ಬಾಬು, ಛಾಯಾಗ್ರಾಹಕರ ಸಂಘದ ಗದಗ ಜಿಲ್ಲಾಧ್ಯಕ್ಷ ಚೆನ್ನಪ್ಪ ಬ್ಯಾಹಟ್ಟಿ, ತಾಲೂಕು ಸಂಘದ ಗೌರವಾಧ್ಯಕ್ಷ ಕಾಶೀನಾಥ ಕಲಬುರ್ಗಿ ಮಾತನಾಡಿದರು.

ನಾಗರಾಜ ಅರ್ಕಸಾಲಿ, ಬಸವರಾಜ ಪಲ್ಲೇದ, ಶರಣಬಸಯ್ಯ ಅರವಟಗಿಮಠ, ಮಹಾಂತೇಶ ಗುಗ್ಗರಿ, ಶಿವಕುಮಾರ ಉದಂಡಿ, ಸುರೇಶ ಕಲಬುರ್ಗಿ, ಮುತ್ತಣ್ಣ ಹಾಳಕೇರಿ, ಹನುಮಂತ ರಾಮೇನಹಳ್ಳಿ, ಗಿರೀಶ ಪುರದ, ಸಂತೋಷ ಅಳವಂಡಿ, ವಸಂತ ಜೊಂಡಿ, ರಾಜು ಚಿಕ್ಕಣ್ಣವರ ಉಪಸ್ಥಿತರರು ಇದ್ದರು. ವೀರೇಶ ಹಡಗಲಿ ಸ್ವಾಗತಿಸಿದರು. ರಂಗನಾಥ ಕಂದಗಲ್ ನಿರೂಪಿಸಿದರು. ಅಮರೇಶ ಆರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net