ಜಿಟಿಟಿಸಿಯಲ್ಲಿ ಹೊಸ ಕೋರ್ಸ್ ಪ್ರಾರಂಭ: ಪ್ರಾಂಶುಪಾಲ ಟಿ.ಶಿವಕುಮಾರ್ ಮಾಹಿತಿ

Government Equipment and Training Center Principal Press Conference Mandya
Published on

ಮಂಡ್ಯ: ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ದಲ್ಲಿ 2025-26ನೇ ಸಾಲಿನ ಪ್ರವೇಶ ಆರಂಭಗೊಂಡಿದೆ. ಈ ಸಾಲಿನಲ್ಲಿ ನೂತನವಾಗಿ ಎರಡು ಹೊಸ ಕೋರ್ಸ್ ಪರಿಚಯಿಸಲಾಗಿದೆ ಎಂದು ಕೇಂದ್ರದ ಪ್ರಾಂಶುಪಾಲ ಟಿ.ಶಿವಕುಮಾರ್ ತಿಳಿಸಿದರು.

ಕೇಂದ್ರದಲ್ಲಿ ಇದುವರೆಗೂ ಡಿಪ್ಲೊಮೊ ಇನ್ ಟೂಲ್, ಡೈ ಮೇಕಿಂಗ್ ಕೋರ್ಸ್ ಇತ್ತು. ಇದೀಗ ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಹಾಗೂ ಅಟೋಮೇಷನ್ ರೋಬೋಟಿಕ್ಸ್ ಕೋರ್ಸ್ ಪರಿಚಯಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಲ್ಲ ಕೋರ್ಸ್‌ಗಳಿಗೆ ಹತ್ತನೇ ತರಗತಿ ಉತ್ತೀರ್ಣರಾದರೂ ನಾಲ್ಕು ವರ್ಷ ಮತ್ತು ದ್ವಿತೀಯ ಪಿಯುಸಿ, ಐಟಿಐ ಉತ್ತೀರ್ಣರಾದವರು 3 ವರ್ಷಕ್ಕೆ ಪ್ರವೇಶ ಪಡೆಯಬಹುದಾಗಿದೆ. ಆಸಕ್ತಿ ಉಳ್ಳವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಕಾಲೇಜಿನಲ್ಲಿ ನೇರವಾಗಿ ಅರ್ಜಿ ಪಡೆದು ಸಲ್ಲಿಸಬಹುದಾಗಿತ್ತು. ಆದರೆ ಈಗ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಬದಲಿಸಲಾಗಿದೆ ಎಂದು ಹೇಳಿದರು.

ಕೋರ್ಸ್‌ನ ಮೊದಲ ವರ್ಷಕ್ಕೆ 33,200 ರೂ, ಎರಡನೇ ವರ್ಷಕ್ಕೆ 26,000 ರೂ, ಮೂರನೇ ವರ್ಷಕ್ಕೆ 26,000 ರೂ ಮತ್ತು ನಾಲ್ಕನೇ ವರ್ಷಕ್ಕೆ 11,000 ರೂ ಶುಲ್ಕವಿದೆ. ಮೊದಲ ಮೂರು ವರ್ಷಗಳು ವಿದ್ಯಾರ್ಥಿ ವೇತನದ ಮೂಲಕ ಹಿಂಪಡೆಯಲು ಅವಕಾಶ ಇರುತ್ತದೆ ಎಂದು ವಿವರಿಸಿದರು.

ಉಪನ್ಯಾಸಕರಾದ ನರೇಂದ್ರಬಾಬು, ಶರತ್‌ರಾಜ್ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net