

ಗೋಕರ್ಣ: ಕಳೆದ ಮೂರು ದಶಕಗಳ ಹಿಂದೆ ಒಲಿಂಪಿಕ್ಸ್‌ನಂತಹ ಜಾಗತಿಕ ಕ್ರೀಡೆಗಳಲ್ಲಿ ದೇಶದ ಸ್ಥಾನ ಅತ್ಯಂತ ಕೆಳ ಸ್ತರದಲ್ಲಿತ್ತು. ಆದರೆ, ಇತ್ತೀಚಿನ ದಶಕಗಳಲ್ಲಿ ಸರ್ಕಾರದಿಂದ ಮತ್ತು ಸಾರ್ವಜನಿಕವಾಗಿ ಕ್ರೀಡೆಗಳಿಗೆ ಪ್ರೋತ್ಸಾಹ ದೊರೆಯುತ್ತಿದ್ದು, ನಮ್ಮ ದೇಶ ವಿಶ್ವ ಮಟ್ಟದಲ್ಲಿ ಕೀರ್ತಿ ಪಡೆದು ಗುರುತಿಸಿಕೊಳ್ಳುವಂತಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ನುಡಿದರು.
ತದಡಿಯ ಬೆಲೆಗದ್ದೆ ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಇಲ್ಲಿನ ಭದ್ರಕಾಳಿ ಕಾಲೇಜ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ಕಲಿಸುವುದಕ್ಕೆ ನೀಡಿದಷ್ಟೇ ಪ್ರಾಶಸ್ತ್ಯವನ್ನು ಕ್ರೀಡೆಗಳಿಗೂ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡುವಂತಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸಮುನಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಬಿಇಒ ರಾಜೇಂದ್ರ ಭಟ್ಟ ಸ್ವಾಗತಿಸಿದರು. ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ವಿ. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾತಾಲಾ ದಿನ್ನಿ, ಸಾಯಿ ಗಾಂವಕರ, ನಾಗರಾಜ ನಾಯಕ ತೊರ್ಕೆ, ಅರುಣ ನಾಯ್ಕ ತದಡಿ, ರಮಾನಂದ ನಾಯ್ಕ ತದಡಿ, ಮಹೇಶ ಶೆಟ್ಟಿ, ದಯಾನಂದ ನಾಯ್ಕ ತದಡಿ, ರಾಜೀವ ಗಾಂವಕರ, ರಮೇಶ ಪ್ರಸಾದ, ಎಸ್.ಸಿ. ನಾಯಕ್, ಶುಭಕರಿ ನಾಯಕ, ಸಿ.ಜಿ. ನಾಯಕ್‌ದೊರೆ ಇತರರಿದ್ದರು. ಶಿಕ್ಷಕ ಎನ್.ರಾಮು ನಿರ್ವಹಿಸಿದರು. ಉದ್ದಂಡ ಗಾಂವಕರ ವಂದಿಸಿದರು.