Government Employees Union ಅಧ್ಯಕ್ಷರಾಗಿ ಸತತ 3 ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಸಂಜೀವಕುಮಾರ ನಾಯ್ಕ

government employees union
Published on

ಕಾರವಾರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ government employees union ಉತ್ತರ ಕನ್ನಡ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಆಯುಷ್ ಇಲಾಖೆಯ ಸಂಜೀವ ಕುಮಾರ ನಾಯ್ಕ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲ ತಾಲೂಕು ಸಂಘಗಳ ಚುನಾವಣೆ ನಡೆದ ಬಳಿಕ ಅದರ ಪ್ರತಿನಿಧಿಗಳು ಹಾಗೂ ಜಿಲ್ಲಾ ಸಂಘದ 57 ಸದಸ್ಯರ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷ. ಜಿಲ್ಲಾ ಖಜಾಂಚಿಯಾಗಿ ಕೃಷ್ಣ ಭಟ್ ಅವರು 2 ನೇ ಬಾರಿಗೆ, ಸುರೇಶ ಡಿ.ಶೆಟ್ಟಿ ಅವರು 3 ನೇ ಬಾರಿಗೆ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2024 ರಿಂದ 2029 ರವರೆಗೆ ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ಉತ್ತರ ಕನ್ನಡ ಜಿಲ್ಲಾ ಶಾಖೆಯು ಕರಾವಳಿಯ ಐದು ತಾಲೂಕುಗಳ ವ್ಯಾಪ್ತಿ ಹೊಂದಿದೆ. ಘಟ್ಟದ ಮೇಲಿನ ತಾಲೂಕುಗಳನ್ನೊಳಗೊಂಡ ಶಿರಸಿ ಶಾಖೆ ಪ್ರತ್ಯೇಕವಾಗಿದೆ.

government employees union ಗೆಆಯ್ಕೆಯಾದವರು

ಕೃಷಿ ಇಲಾಖೆಯಿಂದ ನವೀನ ಎಸ್.ನಾಯ್ಕ,ಗೌರೀಶ ಎಂ.ನಾಯ್ಕ, ಪಶು ಸಂಗೋಪನಾ ಇಲಾಖೆಯಿಂದ ರಾಘವೇಂದ್ರ ಸಿ.ಅಡೆಮನೆ, ಕಂದಾಯ ಇಲಾಖೆಯಿಂದ ಪ್ರಮೋದ ಇ.ನಾಯ್ಕ, ರಾಜೇಶ ಕೆ.ವಾರೀಕ, ಶ್ರೀಧರ ಎಂ.ನಾಯ್ಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪ್ರದೀಪ ಜಿ.ನಾಯ್ಕ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಿಂದ ದತ್ತಾತ್ರೆಯ ಎ.ನಾಯ್ಕ,

ವಾಣಿಜ್ಯ ತೆರಿಗೆ ಇಲಾಖೆಯಿಂದ ಶಣ್ಮುಖಪ್ಪ ನರೇಗಲ್, ದೀಪಕ ನಾಯ್ಕ, ಸಹಕಾರ ಇಲಾಖೆಯಿಂದ ಸುಮನಾ ಎಂ.ನಾಯ್ಕ, ಲೋಕೋಪಯೋಗಿ ಇಲಾಖೆಯಿಂದ ವಿಜಯ ಆರ್.ಗುನಗಿ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಕೃಷ್ಣ ಎಸ್.ಭಟ್, ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಸುನೀಲ ಡಿ.ನಾಯ್ಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರಾಜೇಶ ನಾಯ್ಕ, ಸಂದೀಪ ಕೊಠಾರಕರ್ government employees union ಗೆ ಆಯ್ಕೆಯಾಗಿದ್ದಾರೆ.

ಅಬಕಾರಿ ಇಲಾಖೆಯಿಂದ ಸಿದ್ಧಾರ್ಥ ಠಕ್ಕರ್, ಸಮಾಜ ಕಲ್ಯಾಣ ಇಲಾಖೆಯಿಂದ ರಮೇಶ ಎನ್.ನಾಯ್ಕ, ಹಿಂದುಳಿದ ವರ್ಗಗಳ ಇಲಾಖೆಯಿಂದ ಶ್ರೀದೇವಿ ಮುದ್ದಕ್ಕನವರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆನಂದ ಎಂ.ನಾಯ್ಕ, ಮೀನುಗಾರಿಕೆ ಇಲಾಖೆಯಿಂದ ಸುಮನಾ ದುರ್ಗೇಕರ್, ಅರಣ್ಯ ಇಲಾಖೆಯಿಂದ ರಾಜು ಟಿ.ನಾಯ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರತೀಶ ನಾಯ್ಕ, ರೇಷ್ಮಾ ಮಿರಾಶಿ, ಪದ್ಮಜಾ ಗುರವ್, ದಿಲೀಪ ಮಾಂಡ್ಲೇಕರ್, ಜಿಲ್ಲಾ ಆಸ್ಪತ್ರೆಯಿಂದ ಸಪ್ನಾ ಆರ್.ನಾಯ್ಕ, ಬಸವರಾಜ ಮುಳಗುಂದ, ಆಯುಷ್ ಇಲಾಖೆಯಿಂದ ಸಂಜೀವ ಕುಮಾರ ನಾಯ್ಕ, ತೋಟಗಾರಿಕೆ ಇಲಾಖೆಯಿಂದ ಸುನೀಲ ಅಂಕೋಲೆಕರ್, ಕೈಗಾರಿಕೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಿಂದ ವಿಶೋಖಾ ದೀಕ್ಷಿತ್, ವಾರ್ತಾ ಇಲಾಖೆಯಿಂದ ಗಂಗಾಧರ ಚೆಲುವಾದಿ, ಗ್ರಂಥಾಲಯ ಇಲಾಖೆಯಿಂದ ಪ್ರವೀಣ ಬೆನಕಟ್ಟಿ,government employees union ಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ವಿಮಾ ನಿಗಮದಿಂದ ಮಂಜು ಕೆ.ಗೊಂಡ, ಸರ್ಕಾರಿ ಪ್ರಾಥಮಿಕ ಶಾಲೆಗಳಿಂದ ರಾಮಚಂದ್ರ ಪಿ.ಗೌಡ, ಪ್ರಕಾಶ ಚೌಹಾಣ, ರಾಜೇಶ ಡಿ.ನಾಯ್ಕ, ಸಚಿನ್ ಎ.ನಾಯ್ಕ, ನಾಗವೇಣಿ ಎಸ್.ನಾಯ್ಕ, ಸರ್ಕಾರಿ ಪ್ರೌಢಶಾಲೆಯಿಂದ ಮೀನಾಕ್ಷಿ ನಾಯಕ, ಶ್ರೀದೇವಿ ಕೆರೆಮನೆ, ಸರ್ಕಾರಿ ಪದವಿಪೂರ್ವ ಕಾಲೇಜ್‌ನಿಂದ ಮಂಜುನಾಥ ಗುನಗಾ, ಪದವಿ ಕಾಲೇಜ್‌ನಿಂದ ರಿಷಿಕೇಶ ಭೋಮಕರ್, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ವಾಸುದೇವ ಗೌಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಶಿವಕುಮಾರ್, ಸಣ್ಣ ಉಳಿತಾಯ ಇಲಾಖೆಯಿಂದ ಗಣೇಶ ಪಟಗಾರ, ಪೊಲೀಸ್ ಇಲಾಖೆ ಕಚೇರಿ ಸಿಬ್ಬಂದಿ ಪರವಾಗಿ ಆನಂದ ಎ.ನಾಯ್ಕ, ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯಿಂದ ಎಂ.ಆರ್.ನಾಯ್ಕ, ಭೂ ಮಾಪನಾ ಇಲಾಖೆಯಿಂದ ರಾಜು ಪೂಜಾರಿ, ಎನ್‌ಸಿಸಿಯಿಂದ ಸುರೇಶ ಡಿ.ಮಾಳಸೇಕರ್, ಖಜಾನೆ ಇಲಾಖೆಯಿಂದ ಉಲ್ಲಾಸ ಎಂ.ನಾಯ್ಕ, ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ವಿನೋದ ನಾಯ್ಕ, ಧಾರ್ಮಿಕ ದತ್ತಿ ಇಲಾಖೆಯಿಂದ ಸುಧಾ ತಳವಾರ್, ನ್ಯಾಯಾಂಗ ಇಲಾಖೆಯಿಂದ ಹನುಮಂತ ಗೌಡ, ಮೋಹನ ಜೋಗಳೇಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಶರದ್ ಠಾಕೇಕರ್, ನಿಗಮ, ಪ್ರಾಽಕಾರ ಮತ್ತು ಮಂಡಳಿಯಿಂದ ಸುರೇಶ ಡಿ.ಶೆಟ್ಟಿ ಅವಿರೋಧವಾಗಿ ಆಯಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net