ಏ. 7 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸತಿಕ ಸ್ಪರ್ಧೆಗಳನ್ನು ಏ. 7 ರಿಂದ 9 ರವರೆಗೆ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪುರುಷರ ವಿಭಾಗದಲ್ಲಿ 45 ವರ್ಷ ಮೇಲ್ಪಟ್ಟ ಹಾಗೂ ಒಳಗಿನವರಿಗೆ ಫುಟ್​ಬಾಲ್​, ವಾಲಿಬಾಲ್​, ಹಾಕಿ, ಕಬಡ್ಡಿ, ಟೇಬಲ್​ ಟೆನ್ನಿಸ್​ (ಸಿಂಗಲ್ಸ್​&ಡಬಲ್ಸ್​) ಟೆನ್ನಿಸ್​, ಶೆಟಲ್​ ಬ್ಯಾಡ್ಮಿಂಟನ್​, ಬಾಲ್​ ಬ್ಯಾಡ್ಮಿಂಟನ್​, ಕೇರಮ್​, ಕ್ರಿಕೆಟ್​, ಬಾಸ್ಕೆಟ್​ಬಾಲ್​, ಚೆಸ್​, ಆಟೋಟಗಳು, ಈಜು, ಭಾರ ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ.

ಮಹಿಳಾ ವಿಭಾಗದಲ್ಲಿ 40 ವರ್ಷ ಮೇಲ್ಪಟ್ಟ ಹಾಗೂ ಒಳಗಿನವರಿಗೆ ಬ್ಯಾಡ್ಮಿಂಟನ್​ (ಸಿಂಗಲ್ಸ್​&ಡಬಲ್ಸ್​), ಟೆನ್ನಿಸ್​ (ಸಿಂಗಲ್ಸ್​&ಡಬಲ್ಸ್​), ಕೇರಮ್​ (ಸಿಂಗಲ್ಸ್​&ಡಬಲ್ಸ್​), ಟೆನಿಕ್ವಾಯಿಟ್​ (ಸಿಂಗಲ್ಸ್​&ಡಬಲ್ಸ್​), ಥ್ರೋಬಾಲ್​, ಈಜು ಹಾಗೂ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಸಾಂಸತಿಕ ಕಾರ್ಯಕ್ರಮಗಳಾದ ಕರ್ನಾಟಕ ಶಾಸಿಯ ಸಂಗೀತ, ಕರ್ನಾಟಕ ಲು ಶಾಸಿಯ ಸಂಗೀತ, ಪಾಶ್ಚಾತ್ಯ ಗಾಯನ, ಜಾನಪದ ಗೀತೆ, ಹಿಂದೂಸ್ತಾನಿ ಶಾಸಿಯ ಸಂಗೀತ, ಹಿಂದೂಸ್ತಾನಿ ಲು ಶಾಸಿಯ ಸಂಗೀತ, ಕರ್ನಾಟಕ ಕ್ಲಾಸಿಕಲ್​, ನೃತ್ಯ, ಕಥಕ್​, ಭರತನಾಟ್ಯ, ಮಣಿಪುರಿ, ಕುಚುಪುಡಿ, ಓಡಿಸ್ಸಿ, ಕಥಕಳಿ ಹಾಗೂ ಕಿರುನಾಟಕ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗೆ ಏರ್ಪಡಿಸಲಾಗಿದೆ.

ರಾಜ್ಯ ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಪಡೆಯಲು ಅರ್ಹತೆ ಪಡೆಯಲಿದ್ದಾರೆ. ಸದರಿ ನೌಕರರು ಅವರ ಕೇಂದ್ರ ಸ್ಥಾನದಿಂದ ಆಯ್ಕೆ ನಡೆಯುವ ಸ್ಥಳಕ್ಕೆ ಹೋಗಿ ಬರುವ ಪ್ರಯಾಣಕ್ಕೆ ಎರಡನೇ ದರ್ಜೆ ರೈಲಿನ ಅಥವಾ ಎಕ್ಸಪ್ರೆಸ್​ ಬಸ್​ ದರವನ್ನು ಪ್ರಯಾಣ ಭತ್ಯೆಯಾಗಿ ಅವರ ಮಾತೃ ಇಲಾಖೆಯಿಂದ ನಿಯಮಾವಳಿಗಳನ್ವಯ ಪಡೆಯಬಹುದಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆವುಳ್ಳ ನೌಕರರು ಏ. 3 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಕ್ರೀಡಾಕೂಟದ ನೋಂದಣಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ. 08352&251085 ಅಥವಾ 7019008443ಕ್ಕೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net