ಸರ್ಕಾರಿ ನೌಕರರೆಂದು ಘೋಷಿಸಲಿ

sandoor
ಸಂಡೂರು ತಾಲೂಕು ಗ್ರಾಪಂ ನೌಕರರ ಸಂಘದ 6ನೇ ಸ್ಮಮೇಳನ ಭಾನುವಾರ ನಡೆಯಿತು. ಗ್ರಾಪಂ ನೌಕರರ ಸಂಘದ ರಾಜ್ಯ ಖಜಾಂಚಿ ಆರ್.ಎಸ್.ಬಸವರಾಜ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಎ.ಸ್ವಾಮಿ ಇತರರಿದ್ದರು.
Published on

ಸಂಡೂರು: ಗ್ರಾಪಂ ನೌಕರರಿಗೆ ಕನಿಷ್ಠ ವೇತನ 28ಸಾವಿರ ರೂ. ನಿಗದಿಪಡಿಸುವಂತೆ ಆಗ್ರಹಿಸಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯ ಖಜಾಂಚಿ ಆರ್.ಎಸ್.ಬಸವರಾಜ ಹೇಳಿದರು.

ತಾಪಂ ಸಭಾಂಗಣದಲ್ಲಿ ಆಯೋಜಸಿದ್ದ ಸಂಡೂರು ತಾಲೂಕಿನ 6ನೇ ಸಮ್ಮೇಳನ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಕರ ವಸೂಲಿಗಾರರು, ಕ್ಲರ್ಕ್, ಡೇಟಾ ಎಂಟ್ರಿ, ಆಪರೇಟರ್, ನೀರು ಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಸರ್ಕಾರಿ ನೌಕರರಾಗಿ ಘೋಷಿಸಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸುವುದು ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ ಮಾತನಾಡಿ, ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕ ವರ್ಗದ ಮೇಲೆ ದಾಳಿ ನಡೆದಿದೆ. ಖಾಲಿಯಿರುವ ಹುದ್ದೆಗಳನ್ನು ತುಂಬುತ್ತಿಲ್ಲ. ಗುತ್ತಿಗೆ, ದಿನಗೂಲಿ, ಗೌರವ ಧನ ಹೆಸರಿನಲ್ಲಿ ಅಲ್ಪ ವೇತನ ನೀಡಿ ಶೋಷಣೆ ಮಾಡಲಾಗುತ್ತಿದೆ. ಕೆಲಸದ ಸಮಯ ಹೆಚ್ಚಿಸಿ ಹಾಗೂ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳುವುದು ಕಾನೂನು ಬದ್ಧಗೊಳಿಸಲಾಗಿದೆ. ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಹೋರಾಟ ನಡೆಸಲಾಗುವುದು ಎಂದರು.

ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ ಸ್ವಾಮಿ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಎ.ಸ್ವಾಮಿ, ಸಮ್ಮೇಳನದ ಅಧ್ಯಕ್ಷತೆ ಡಿ.ಕೃಷ್ಣನಾಯ್ಕ ವಹಿಸಿದ್ದರು.

ಹೊಸ ಸಮಿತಿಯನ್ನು ಆಯ್ಕೆ

ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಷರ್ಮಾಷ್ ವಲಿ(ಅಧ್ಯಕ್ಷ), ಭೀಮಣ್ಣ ಮೆಟ್ರಿಕಿ (ಪ್ರ.ಕಾರ್ಯದರ್ಶಿ), ಡಿ.ಕೃಷ್ಣನಾಯ್ಕ, ವೀರಭದ್ರ ಬಂಡ್ರಿ, ನಾಗೇಂದ್ರ ಆಚಾರಿ ವಡ್ಡು, ಸಿದ್ದಲಿಂಗಸ್ವಾಮಿ ಸೋವೆನಹಳ್ಳಿ, ತಿಮ್ಮಾರೆಡ್ಡಿ ವಿಠಲಾಪುರ, ನರಸಿಂಹಮೂರ್ತಿ ಯಶವಂತನಗರ, ಈರಣ್ಣ ನಿಡುಗುರ್ತಿ,(ಉಪಾಧ್ಯಕ್ಷರು), ಕೆ.ಕರಿಯಪ್ಪ ತಾಳೂರು (ಖಜಾಂಚಿ), ಸಹ ಕಾರ್ಯದರ್ಶಿಗಳಾಗಿ ಕುಮಾರ ಬನ್ನಿಹಟ್ಟಿ, ಸಿದ್ದಯ್ಯ ಸ್ವಾಮಿ ರಾಜಾಪುರ, ಗಣೇಶ ನರಸಿಂಗಪುರ, ಸತ್ಯನಾರಾಯಣ ಕಾಳಿಂಗೇರ, ಕಲ್ಪನಾ ಎಚ್.ಕೆ.ಹಳ್ಳಿ, ಕಾಶ್ಯನಾಯ್ಕ ಸುಶೀಲನಗರ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net