

ಕಬ್ಬೂರು: ಪಾಲಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡದೆ ಖಾಸಗಿ ಶಾಲೆಗಳತ್ತ ಒಲವು ತೋರುತ್ತಿರುವುದು ದುರ್ದೈವದ ಸಂಗತಿ ಎಂದು ಹುಕ್ಕೇರಿ ಕ್ಯಾರಗುಡ್ಡ ಔಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ಸಮೀಪದ ಜಾಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕನ್ನಡ ಶಾಲೆಯಲ್ಲಿ 7ನೇ ತರಗತಿ ವರೆಗೆ ಓದಿದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡುವಂತೆ ಸರ್ಕಾರ ಆದೇಶ ಮಾಡಬೇಕು ಎಂದರು.
ಇಂಚಗೇರಿ ಅಧ್ಯಾತ್ಮ ಸಂಪ್ರದಾಯ ಮಠದ ಶಶಿಕಾಂತ ಗುರೂಜಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿ ನೀಡಬೇಕು ಎಂದರು. ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಮಂಗಿ ಮಾತನಾಡಿದರು.
ಮಾಳಪ್ಪ ಗೊರಗುದ್ದಿ, ಮಲ್ಲೇಶ ಹನುಮಂತಗೋಳ, ಹನುಮಂತ ಕರಿಕಟ್ಟಿ, ಮುತ್ತಪ್ಪ ಹನುಮನವರ, ಮಾರುತಿ ಹಮ್ಮಾರ, ಭೂದಾನಿ ನಕುಲ್ ಕತ್ತಿ, ಲಕ್ಷ್ಮಣ ಹನುಮನ್ನವರ, ಕೆಂಪಯ್ಯ ಕೊಂಗನೊಳಿ, ದುಂಡಪ್ಪ ಕರಿಕಟ್ಟಿ, ಎಂ.ಬಿ.ತೇರದಾಳೆ, ರಾಮಚಂದ್ರ ಪುಕಾಟೆ, ಭೀಮಪ್ಪ ನಿಪ್ಪಾಣಿ, ಮಾರುತಿ ಹನುಮನವರ, ಹನುಮಂತ ಹಂಜಿ, ರಾಮಕೃಷ್ಣ ಗಡಗಡಿ, ಲಕ್ಷ್ಮಣ ಯಡ್ರಾವಿ, ಸಿದ್ದು ಕಿಂಡಿ, ರಾಮಪ್ಪ ಖಾನಾಪುರೆ, ಎಲ್.ಬಿ.ದೊಡ್ಡಮನಿ, ಅನಿಲ ಅಂಜಿ ಇತರರಿದ್ದರು.