ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಗೆದ್ದವರ ಸಂಭ್ರಮ

16 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ 10 ನಿರ್ದೇಶಕರ ಆಯ್ಕೆ ಚುನಾವಣೆ ಶನಿವಾರ ನಡೆಯಿತು. ಬೆಳಗ್ಗೆಯಿಂದ ಮತದಾನ ನಡೆದು ಸಂಜೆ ವೇಳೆಗೆ ಮತ ಎಣಿಕೆ ಮತ್ತು ಫಲಿತಾಂಶ ಹೊರಬಿದ್ದಿತು.

ಕೃಷಿ ಇಲಾಖೆ (ತಾಂತ್ರಿಕ ವೃಂದ) ನಿರ್ದೇಶಕ ಸ್ಥಾನಕ್ಕೆ ಮಹಾದೇವ ಸರಶೆಟ್ಟಿ, ಕಂದಾಯ ಇಲಾಖೆಯಿಂದ ಎಂ.ಜಿ. ಸೊಲಗಿ, ಹಿಂದುಳಿದ ವರ್ಗಗಳ ಇಲಾಖೆಯಿಂದ ಗಂಗಾಧರ ಕತ್ತಿ, ಮೀನುಗಾರಿಕೆ ಇಲಾಖೆಯಿಂದ ಆತ್ಮಾನಂದ ಸತ್ತೆನ್ನವರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆತ್ಮಾನಂದ ಉಳಶೆಟ್ಟಿ, ಗ್ರಂಥಾಲಯ ಇಲಾಖೆಯಿಂದ ಅಡಿವೆಪ್ಪ ಗಾಯಕವಾಡ, ಭೂಮಾಪನ ಇಲಾಖೆಯಿಂದ ಮಂಜುನಾಥ ಅಮ್ಮಿನಭಾವಿ, ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಮಂಜುನಾಥ ಯಡಳ್ಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗಿರೀಶ ಚೌಡಕಿ ಚುನಾಯಿತರಾದರು ಎಂದು ಚುನಾವಣಾಽಕಾರಿ ಗಿರೀಶ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net