

ಕಂಪ್ಲಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಚಾರ ಮತ್ತು ಸಂಘಟನಾ ಸಮಿತಿಯ ಸದಸ್ಯರ ಆಯ್ಕೆ ಇತ್ತೀಚೆಗೆ ನಡೆಯಿತು.
ತಾಲೂಕಿನ ದೇವಲಾಪುರ ಸಹಿಪ್ರಾ ಶಾಲೆ ಪ್ರಭಾರ ಮುಖ್ಯಶಿಕ್ಷಕ ಎಚ್.ಪಿ.ಸೋಮಶೇಖರ, ಕಂಪ್ಲಿ ಕೋಟೆ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಚಂದ್ರಶೇಖರ ಶೆಟ್ರು ಸಮಿತಿಗೆ ನೇಮಕಗೊಂಡಿದ್ದಾರೆ. ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೂಚಿಸಿದ್ದಾರೆ.