ಸರ್ಕಾರ ಸಂಪೂರ್ಣ ಸಾಲಮನ್ನಾ ಮಾಡಲಿ

17Anand5
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ನೇಗಿಲ ಯೋಗಿ ರೆತ ಸೇವಾ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಕಲ್ಲಪ್ಪ ಹರಿಯಾಲ, ಭಾಗ್ಯಶ್ರೀ ಹಣಬರ, ಕಲ್ಲಪ್ಪ ರಪಾಟಿ, ಸುರೇಖಾ ವಾಲಿ, ಗುಂಡಪ್ಪ ಸನದಿ, ಶಂಕರ ಬೋಳನ್ನವರ ಇತರರಿದ್ದರು.
Published on

ಬೆಳಗಾವಿ: ರಾಜ್ಯದ ರೆತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ನೇಗಿಲ ಯೋಗಿ ರೆತ ಸೇವಾ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದ ಚನ್ನಮ್ಮ ವತ್ತದಿಂದ ಜಿಲ್ಲಾಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ನಡೆಸಿ ಜಿಲ್ಲಾಕಾರಿಗೆ ಮನವಿ ಸಲ್ಲಿಸಲಾಯಿತು.

ವಿದ್ಯುತ್ ಸಮಸ್ಯೆಯಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೃಷಿ ಪಂಪ್‌ಸೆಟ್‌ಗಳಿಗೆ 10 ಗಂಟೆ ತ್ರೀಫೇಸ್ ಹಾಗೂ ರಾತ್ರಿ ಸಿಂಗಲ್‌ಫೇಸ್ ನಿರಂತರ ವಿದ್ಯುತ್ ಕೊಡಬೇಕು. ಅರಣ್ಯ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ರೆತರಿಗೆ ಬಗರ ಹುಕಂ ಯೋಜನೆಯಡಿ ಜಮೀನಿನ ಹಕ್ಕುಪತ್ರ ವಿತರಿಸಬೇಕು. ಭತ್ತ, ರಾಗಿ, ಶೇಂಗಾ , ಸೋಯಾಬೀನ್ ವಿವಿಧ ಬೆಳೆಗಳ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು. ರೆತ ಮುಖಂಡರಾದ ಕಲ್ಲಪ್ಪ ಹರಿಯಾಲ, ಭಾಗ್ಯಶ್ರೀ ಹಣಬರ, ಕಲ್ಲಪ್ಪ ರಪಾಟಿ, ಸುರೇಖಾ ವಾಲಿ, ಗುಂಡಪ್ಪ ಸನದಿ, ಶಂಕರ ಬೋಳನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net