ಹುಮನಾಬಾದ್-ರಟಕಲ್ ಬಸ್ ಮರು ಆರಂಭ

7hbd1
Published on

ಹುಮನಾಬಾದ್: ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ಬರುವ ಭಕ್ತರಿಗಾಗಿ ಪಟ್ಟಣದಿಂದ ಬಸ್ ಸೌಲಭ್ಯ ಮರು ಆರಂಭಿಸಿದ್ದು, ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ರಟಕಲ್‌ಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಅವರು, ಪಟ್ಟಣದಿಂದ ರಟಕಲ್‌ಗೆ ಮೊದಲು ಬಸ್ ಸೌಲಭ್ಯವಿತ್ತು. ಆದರೆ ಕರೊನಾ ವೇಳೆ ಬಂದ್ ಆಗಿತ್ತು. ಭಕ್ತರ ಒತ್ತಾಸೆಯಂತೆ ಇಂದು ಪುನಃ ಆರಂಭಿಸಲಾಗಿದೆ ಎಂದರು. ಘಟಕ ವ್ಯವಸ್ಥಾಪಕ ವಿಠಲರಾವ ಕದಂ ಮಾತನಾಡಿ, ಪಟ್ಟಣದ ನಿಲ್ದಾಣದಿಂದ ರಟಕಲ್‌ಗೆ ನಿತ್ಯ ಬೆಳಗ್ಗೆ ೭.೩೦, ಮಧ್ಯಾಹ್ನ ೧೨ ಹಾಗೂ ಸಂಜೆ ೫ ಹೀಗೆ ಮೂರು ಬಾರಿ ಬಸ್ ಸಂಚರಿಸಲಿದೆ. ಚಿಟಗುಪ್ಪ, ರಾಂಪುರ, ಮುದ್ನಾಳ, ಸೋಂತ ಮಾರ್ಗವಾಗಿ ತೆರಳಲಿದೆ ಎಂದು ತಿಳಿಸಿದರು. ಪಿಎಸ್‌ಐ ತಿಮ್ಮಯ್ಯ, ಪ್ರಮುಖರಾದ ಮಲ್ಲಿಕಾರ್ಜುನ ಸೀಗಿ, ಗಿರೀಶ ತುಂಬಾ, ಸೂರ್ಯಕಾಂತ ಮಠಪತಿ, ಇಲಿಯಾಸ್ ಖಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net