ರಾಣಿ ಶುಗರ್ಸ್​ ಪುನಶ್ಚೇತನಕ್ಕೆ ಸರ್ಕಾರದ ನೆರವು: ಹೆಬ್ಬಾಳ್ಕರ್

23dvk 7
Published on

ಬೆಳಗಾವಿ: ರೈತರ ಜೀವನಾಡಿಯಾಗಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರದ ನೆರವು ಕೋರಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶ್ರೀವೇ ಮುಖ್ಯಮಂತ್ರಿ ಬಳಿ ನಿಯೋಗ ಒಯ್ಯಲಾಗುವುದು ಎಂದು ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಹೇಳಿದರು.

ಚನ್ನಮ್ಮನ ಕಿತ್ತೂರು ತಾಲೂಕಿನ ಹುಣಶಿಕಟ್ಟಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಸಚಿವರು, ಶಾಸಕರು, ಡಿಸಿಸಿ ಬ್ಯಾಂಕ್​ ನೂತನ ನಿರ್ದೇಶಕರು ಹಾಗೂ ಮಲಪ್ರಭಾ ಶುಗರ್ಸ್​ ನೂತನ ಆಡಳಿತ ಮಂಡಳಿ ಅಧ್ಯ, ಉಪಾಧ್ಯ ಹಾಗೂ ನಿರ್ದೇಶಕರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಖಾನೆ ಸಂಕಷ್ಟದಲ್ಲಿದೆ. ನಮ್ಮ ಮೇಲೆ ವಿಶ್ವಾಸವಿಟ್ಟು ರೈತರು ನಮ್ಮ ಪೆನಲ್​ ಗೆಲ್ಲಿಸಿದ್ದಾರೆ. ಸರ್ಕಾರದಿಂದ ಸಾಧ್ಯವಾದ ನೆರವು ಪಡೆದು ಕಾರ್ಖಾನೆ ಅಭಿವೃದ್ಧಿಪಡಿಸಲಾಗುವುದು. ಅಧಿಕಾರ ಸಿಕ್ಕಾಗ ಜನರ ಕೆಲಸ ಮಾಡಿ ವಿಶ್ವಾಸ ಗಳಿಸಬೇಕು. ಸಹಕಾರ ೇತ್ರದಲ್ಲಿ ಪ ಇಲ್ಲ. ನಾವೆಲ್ಲರೂ ಸೇರಿ ಪಾತೀತವಾಗಿ ಕಾರ್ಖಾನೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತೇವೆ ಎಂದರು.

ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಆಸೀಫ್​ ಸೇಠ್​, ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ, ನಾನಾಸಾಹೇಬ ಪಾಟೀಲ, ರಾಹುಲ ಜಾರಕಿಹೊಳಿ, ಸುನಿಲ ಹನಮಣ್ಣವರ, ಶಂಕರ ಸದೆಪ್ಪ ಹೋಳಿ, ಲಕ್ಷಿ$್ಮ ಹೋಳಿ, ದೀಪಾ ಹೋಳಿ, ಬಸವರಾಜ ಶೇಗಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net