ಮದ್ಯವ್ಯಸನಿಗಳಿಗೆ ಸರ್ಕಾರದ ನೆರವು

ನಂದಿಪುರದಲ್ಲಿ ಮದ್ಯವರ್ಜನ ಶಿಬಿರವನ್ನು ಶಾಸಕ ನೇಮಿರಾಜ್ ನಾಯ್ಕ ಉದ್ಘಾಟಿಸಿದರು. ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಹಾಗೂ ಗದ್ದಕೆರೆಯ ಚರಂತೇಶ ಸ್ವಾಮೀಜಿ ಇದ್ದರು.
ನಂದಿಪುರದಲ್ಲಿ ಮದ್ಯವರ್ಜನ ಶಿಬಿರವನ್ನು ಶಾಸಕ ನೇಮಿರಾಜ್ ನಾಯ್ಕ ಉದ್ಘಾಟಿಸಿದರು. ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಹಾಗೂ ಗದ್ದಕೆರೆಯ ಚರಂತೇಶ ಸ್ವಾಮೀಜಿ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಮದ್ಯವ್ಯಸನದಿಂದ ಹೊರಬರುವವರಿಗೆ ಗಂಗಾ ಕಲ್ಯಾಣ ಯೋಜನೆ, ಸರ್ಕಾರಿ ಸಾಲ ಸೌಲಭ್ಯಗಳು ಹಾಗೂ ವೈಯಕ್ತಿಕವಾಗಿ ನೆರವು ನೀಡಲಾಗುವುದು ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಭರವಸೆ ನೀಡಿದರು.

ನಂದಿಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1976ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಮದ್ಯ ವ್ಯಸನದಿಂದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ, ಜತೆಗೆ ನೆಮ್ಮದಿ ಹಾಳಾಗುತ್ತದೆ. ಮನುಷ್ಯನಾಗಿ ಹುಟ್ಟಿರುವುದೇ ದೊಡ್ಡ ಭಾಗ್ಯ. ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿದರು.

ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಮದ್ಯವ್ಯಸನಿಗಳಾಗಿ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಮದ್ಯ ಸೇವನೆಯು ನಿಮ್ಮ ಸಂಸಾರಕ್ಕೆ ಕುತ್ತು ಎಂದು ಕಿವಿಮಾತು ಹೇಳಿದರು.

ಗದ್ದಿಕೆರೆಯ ಚರಂತೇಶ್ವರ ಸ್ವಾಮೀಜಿ ಮಾತನಾಡಿ, ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಮೂಲಕ ಲಕ್ಷಾಂತರ ಕುಟುಂಬಗಳ ನೆಮ್ಮದಿಗೆ ಕಾರಣರಾಗಿದ್ದಾರೆ. ಅವರ ಮಾರ್ಗದರ್ಶನ ನಿಮಗೆಲ್ಲ ಅಗತ್ಯವಿದೆ ಎಂದು ಹೇಳಿದರು.

ಮದ್ಯವರ್ಜನ ಶಿಬಿರದ ಸಂಪನ್ಮೂಲ ವ್ಯಕ್ತಿ ನಾಗೇಶ್, ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ರಾಜ್ಯ ಜನಜಾಗೃತಿ ವೇದಿಕೆಯ ಸಂಘಟನಾ ಅಧ್ಯಕ್ಷ ಬದಾಮಿ ನಟರಾಜ, ಜಿಲ್ಲಾಧ್ಯಕ್ಷ ಕೂಡ್ಲಿಗಿಯ ಕಾವಲ್ಲಿ ಶಿವಪ್ಪ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿವರೆಡ್ಡಿ ಬಸವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ. ಮಲ್ಲಿಕಾರ್ಜುನ, ಪುರಸಭೆ ಸದಸ್ಯ ದೀಪಕ್‌ಸಾ ಕಠಾರೆ, ಪ್ರಮುಖರಾದ ಎನ್. ವೆಂಕಣ್ಣ, ಜಿ.ಎಂ. ಜಗದೀಶ, ಬಸವರೆಡ್ಡಿ, ಮಂಜುನಾಥ, ಚಿತವಾಡ್ಗಿ ಪ್ರಕಾಶ, ದಿವಾಕರಗೌಡ, ಇಟ್ಟಿಗಿ ಕೊಟ್ರೇಶ, ಉದಯ ಭಾಸ್ಕರ, ಶಿಲ್ಪಕಲಾ, ರುದ್ರಮ್ಮ, ಹಗರಿಬೊಮ್ಮನಹಳ್ಳಿ ಯೋಜನಾಧಿಕಾರಿ ವಾಣಿ ಎಂ.ಎಂ, ಚಂದ್ರಶೇಖರ್ ಹಾಗೂ ವಲಯ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net