ಆರೋಗ್ಯ ಇಲಾಖೆಯಲ್ಲಿ 1505 ಹುದ್ದೆ ನೇಮಕಾತಿ ಷರತ್ತಿಗೊಳಪಟ್ಟು ಸರ್ಕಾರದಿಂದ ಅನುಮತಿ

Arogya soudha
Published on

ಬೆಂಗಳೂರು: ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ.

ವಿವಿಧ ವೃಂದಗಳ ಅರೆ ವೈದ್ಯಕೀಯ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಆಡಳಿತಾತ್ಮಕ ಅನೋದನೆ ಕೋರಿತ್ತು. ಜತೆಗೆ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಅಥವಾ ಒಂದು ವರ್ಷದ ಅವಧಿಗೆ ಸದರಿ ಹುದ್ದೆಗಳನ್ನು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅನುಮತಿ ಕೋರಲಾಗಿತ್ತು.

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ 1,205 ಹುದ್ದೆ ಹಾಗೂ 300 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ, ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಿದೆ.

ಷರತ್ತುಗಳೇನು?: ಆರಂಭದಲ್ಲಿ ಎರಡೂ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಯಾವುದೇ ಕಾನೂನು ಬಿಕ್ಕಟ್ಟು ಎದುರಾಗದಂತೆ ನೋಡಿಕೊಳ್ಳುವುದು. ನೇಮಕಾತಿಗೆ ಈ ಹಿಂದೆ ಕಾರ್ಯನಿರ್ವಹಿಸಿದ ಯಾವುದೇ ಅನುಭವವನ್ನು ಪರಿಗಣಸದೆ, ವೃಂದ ನೇಮಕಾತಿ ನಿಯಮಗಳನ್ವಯ ಭರ್ತಿ ಮಾಡಿಕೊಳ್ಳುವುದು. ಈ ಹುದ್ದೆಗಳಿಗೆ ನೇಮಕವಾದರನ್ನು ನಿಯೋಜಿಸುವಾಗ ಕನಿಷ್ಠ 5 ಸಾವಿರ ಜನಸಂಖ್ಯೆ, 15 ಸಾವಿರ, 20 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ನಿಯೋಜಿಸತಕ್ಕದ್ದು.ಮಂಜೂರಾದ ಹುದ್ದೆಗಳ ಪರಿಷ್ಕರಣೆ : ಮಂಜೂರಾದ ಹುದ್ದೆಗಳ ಸಂಖ್ಯೆಯನ್ನು ಜನಸಂಖ್ಯೆ, ಕಾರ್ಯಭಾರ, ಸಂಚಾರ ವ್ಯಾಪ್ತಿ ಹಾಗೂ ಮಾಹಿತಿ ತಂತ್ರಜ್ಞಾನದ ಬಳಕೆ ಆಧಾರದಲ್ಲಿ ಪರಿಷ್ಕರಣೆ ಮಾಡಬೇಕೆಂದು ಸರ್ಕಾರ ತಿಳಿಸಿದೆ.

ನೇಮಕಾತಿಗೆ ಪರಿಗಣಿಸಲಾಗುವ ಪರೀಕ್ಷಾ ವಿಧಾನ, ಎಜೆನ್ಸಿ ಕುರಿತ ಮಾಹಿತಿಯನ್ನು ಏಳು ದಿನಗಳಲ್ಲಿ ತಿಳಿಸತಕ್ಕದ್ದು. ಹೆಚ್ಚಿನ ಪ್ರತಿಕ್ರಿಯೆಗಳು ದೊರೆಯುವಂತಾಗಲು ಹಾಲಿ ನಿಗದಿಪಡಿಸಲಾಗಿರುವ ಅರ್ಹತಾ ಮಾನದಂಡಗಳನ್ನು ಪರಿಷ್ಕರಣೆ ಮಾಡಬೇಕು. ಇದರಲ್ಲಿ ಜಿಎನ್‌ಎಂ, ಪದವಿ ವಿದ್ಯಾರ್ಹತೆಯನ್ನು ಪರಿಗಣಿಸಬೇಕು. ಜತೆಗೆ ಡೇಟಾ ಎಂಟ್ರಿಗಾಗಿ ಲ್ಯಾಪ್‌ಟಾಪ್, ಟ್ಯಾಬ್, ಸ್ಮಾರ್ಟ್ ೆನ್ ಸೇರಿದಂತೆ ಡಿಜಿಟಲ್ ಸಾಧನಗಳ ಬಳಕೆಯನ್ನು ತಿಳಿದವರಾಗಿರಬೇಕು. ಈ ಎಲ್ಲ ಕಾರಣಕ್ಕಾಗಿ ವೃಂದ ನೇಮಕಾತಿ ನಿಯಮಗಳನ್ನು ಪರಿಷ್ಕರಿಸಬೇಕಿದ್ದು, ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮೂರು ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ.9,871 ಹುದ್ದೆಗಳು ಖಾಲಿ: ಉಳಿಕೆ ಮೂಲವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ ವಿವಿಧ ಹುದ್ದೆಗಳು ಸೇರಿ ಒಟ್ಟು 9,871 ಹುದ್ದೆಗಳು ಖಾಲಿಯಿವೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net