

ಸಿಂದಗಿ:ತಾಲೂಕು ಬಿಜೆಪಿ ಮಂಡಲದಿಂದ ತಾಲೂಕು ಆಡಳಿತ ಸೌಧ ಎದುರು, ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ೂಷಿಸುವುದು ಸೇರಿ ಆರು ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಅ. 14ರಿಂದ ಅರ್ನಿದಿಷ್ಟ, ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕು ಮಂಡಲ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ&ಆಲಮೇಲ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆ ಬಿದ್ದು, ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾನಿಗೀಡಾಗಿ, ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಸರ್ಕಾರ ಮುಂದಾಗಿ, ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ೂಷಿಸಿ, ನೆರವಾಗಬೇಕು ಎಂದು ಒತ್ತಾಯಿಸಿದರು.
ಅತಿವೃಷ್ಟಿಯಿಂದ ಹಾನಿಗೀಡಾದ ತಲಾ ಎಕರೆಗೆ 25 ಸಾವಿರ ರೂ., ಮಳೆಯಿಂದ ಬಿದ್ದ ಪೂರ್ಣ ಮನೆಗಳಿಗೆ ಸರ್ಕಾರ ನೀಡುತ್ತಿರುವ 1.25 ಲ ಬದಲಾಗಿ 5 ಲದ ವರೆಗೆ ಅರ್ಧ ಮನೆಗೆ 50 ಸಾವಿರದಿಂದ 1 ಲ ರೂ., ಭೀಮಾ ನದಿ ನೀರು ಹೊಕ್ಕು ಬೀದಿಗೆ ಬಿದ್ದ ಕುಟುಂಬಗಳಿಗೆ ಐದು ಸಾವಿರ ನೀಡುತ್ತಿದೆ. ಸುಭದ್ರ ಸರ್ಕಾರ ಎನ್ನುವುದು ನಿಮ್ಮ ನಿಲುವಾದರೆ, ತಾಕತ್ತು ಇದ್ದರೆ, ಈ ಪರಿಹಾರದ ಮೊತ್ತವನ್ನು ಹೆಚ್ಚಿಸಿ, ಅತಿವೃಷ್ಟೀಗಿಡಾದ ರೈತರ, ಪ್ರವಾಹಕ್ಕೀಡಾದ ಕುಟುಂಬಗಳ ಕಣ್ಣೀರು ಒರೆಸಿ. ಕಬ್ಬು ಶೇ. 20ರಷ್ಟು ಹಾನಿಗೀಡಾಗಿದೆ. ಪ್ರವಾಹ ಪೀಡಿತ ಗ್ರಾಮಗಳನ್ನು ಶಾಶ್ವತ ಸ್ಥಳಾಂತರ ಮಾಡಿ, ಬಸವ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡಬೇಕು. ಬಹುವಾರ್ಷಿಕ ಬೆಳೆಗಳಿಗೆ ಎಕರೆಗೆ 1 ಲ ಪರಿಹಾರ ಹಾಗೂ ಸಿಂದಗಿ ಆಲಮೇಲ ತಾಲೂಕಿನ ಎಲ್ಲ ಹದಗೆಟ್ಟ, ಗುಂಡಿ ಬಿದ್ದ ರಸ್ತೆಗಳ ಸುಧಾರಣೆ ಮಾಡಬೇಕು ಎಂಬ ಬೇಡಿಕೆಗಳ ಒತ್ತಾಯದೊಂದಿಗೆ ಸಿಂದಗಿ ತಹಸೀಲ್ದಾರ್ ಕಚೇರಿ ಎದುರು ಅ. 14ರಂದು ಬೆಳಗ್ಗೆ 11 ಗಂಟೆಯಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ ಲಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯ ಅಶೋಕ ಅಲ್ಲಾಪೂರ, ಬಿಜೆಪಿ ಮಂಡಲ ಅಧ್ಯ ಸಂತೋಷ ಪಾಟೀಲ ಮಾತನಾಡಿ, ಅಹೋರಾತ್ರಿ ಧರಣಿಯಲ್ಲಿ ತಾಲೂಕಿನ ರೈತರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಲು ಮನವಿ ಮಾಡಿದರು.ಮಂಡಲ ಉಪಾಧ್ಯ ಬಂಗಾರೆಪ್ಪಗೌಡ ಬಿರಾದಾರ, ಮಲ್ಲು ಸಾವಳಸಂಗ, ಗುರುರಾಜ ತಳವಾರ, ಪೀರು ಕೆರೂರ, ಅಶೋಕ ನಾರಾಯಣಪೂರ, ಪ್ರಶಾಂತ ಕದ್ದರಕಿ, ಶಮೀ ಬಿಜಾಪುರ, ಸಿದ್ರಾಮ ಆನಗೊಂಡ, ಸಿದ್ಧಲಿಂಗಯ್ಯ ಹಿರೇಮಠ ಇತರರು ಇದ್ದರು.
* ಕೋಟ್
ದೀಪಾವಳಿ ಸಮೀಪವಿರುವ ಕಾರಣ, ರಾಜಕಾರಣ ಮಾಡಬಾರದು. ಶಾಸಕ ಅಶೋಕ ಮನಗೂಳಿ ಸವಾಲುಗಳಿಗೆ ಉತ್ತರ ನೀಡುವೆ. ಉಪ ಚುನಾವಣೆಯಲ್ಲಿ ಸಿಕ್ಕ ಅಧಿಕಾರದ 16 ತಿಂಗಳಲ್ಲಿಯೇ 90 ಕಿ.ಮೀ., ಡಾಂಬರೀಕರಣ ರಸ್ತೆ ಕಾಮಗಾರಿ ಮಾಡಿರುವೆ. ಗೋಲಗೇರಿ ಭಾಗದಲ್ಲಿ ಶಾಸಕರು 1 ಕಿಮೀ ರಸ್ತೆ ಮಾಡಿದ್ದರೆ, ರಾಜಕೀಯ ಸನ್ಯಾಸತ್ವ ಸ್ವೀಕರಿಸುವೆ. ವಿಧಾನಸಭೆ ವಿಪ ನಾಯಕ ಆರ್. ಅಶೋಕ ಅವರ ಬರುವಿಕೆ ಹಿನ್ನೆಲೆ, ದೇವಣಗಾಂವ ಬ್ರಿಡ್ಜ್ ಸ್ವಚ್ಛತೆಗೆ ಮುಂದಾದರು. ಅವರ ಎರಡೂವರೆ ವರ್ಷದ ಅವಧಿಯಲ್ಲಿ ಮಾಡಿದ್ದಾದರೂ ಏನು?
> ರಮೇಶ ಭೂಸನೂರ, ಮಾಜಿ ಶಾಸಕ, ಸಿಂದಗಿ
ಸಿಂದಗಿ ನಗರದ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಶೋಕ ಅಲ್ಲಾಪೂರ, ಸಂತೋಷ ಪಾಟೀಲ ಡಂಬಳ ಇತರರು ಇದ್ದರು.