

ಮಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೆ.8ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 11.25ಕ್ಕೆ ಸರ್ಕೀಟ್ ಹೌಸ್ ಗೆ ತೆರಳುವರು. 12 ಗಂಟೆಗೆ ನಗರದ ಟಿ.ಎಂ.ಎ. ಪೈ ಕನ್‌ವೆನ್‌ಷನ್ ಸಭಾಂಗಣದಲ್ಲಿ ದಿ ಫಿಸಿಯೋಥೆರಪಿ ಕಾನ್ಫರೆನ್ಸ್ ಮ್ಯಾಂಗಳೂರ್ ಫಿಸಿಯೋಕಾನ್ 2023 ಕಾರ್ಯಕ್ರಮ ಉದ್ಘಾಟಿಸುವರು.
ಮಧ್ಯಾಹ್ನ 1 ಗಂಟೆಗೆ ನಗರದ ಹೋಟೆಲ್ ತಾಜ್ ವಿವಂತಾದಲ್ಲಿ ವಾಸ್ತವ್ಯ ಮಾಡುವರು. 1.30ಕ್ಕೆ ಖಾಸಗಿ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಆಡಳಿತದ ಅಧಿಕಾರಿಗಳೊಂದಿಗೆ ಸಂವಾದ ನಡೆಸುವರು. ಸಂಜೆ 5.25ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.