ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಿ

4cmy4
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮುನುಗನಹಳ್ಳಿಯ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿದು, ಆಕರ್ಷಕ ರೂಪ ನೀಡುವ ಮೂಲಕ ಕೆಚ್ಚದೆಯ ಕನ್ನಡತಿ ಅನು ಅಕ್ಕ ಬಳಗ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ಒಂದು ವಾರದಿಂದಲೂ ಗ್ರಾಮದಲ್ಲಿಯೇ ಠಿಕಾಣಿ ಹೂಡಿದ್ದ ತಂಡವು ಶಾಲೆಯ ಗೋಡೆಗಳಿಗೆ ಬಣ್ಣ ಬಳಿದು, ಆಕರ್ಷಕ ಚಿತ್ರಗಳನ್ನು ಬರೆಸಿವೆ. ಇದರಿಂದ ಸರ್ಕಾರಿ ಶಾಲೆಗೆ ಹೊಸ ರೂಪ ಬಂದಿದೆ. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ತಂಡದ ಕೆಚ್ಚದೆಯ ನಾಯಕಿ ಅಕ್ಕ ಅನು ಮತ್ತು ಸದಸ್ಯರಾದ ಯಲ್ಲಾಪುರ ಮಲ್ಲಿಕಾರ್ಜುನ, ಕಿರಣ ಐಹೊಳೆ, ಬಸವರಾಜ ತಳಬಾಳ, ಕಲ್ಬುರ್ಗಿಯ ಅಕ್ಷಯ, ಭಾಗ್ಯನಗರದ ಪರುಶುರಾಮ, ಸಿಂಧ ನೂರಿನ ವೆಂಕಟೇಶ ಕಟ್ಟಿಮನಿ ಚೆಳಗೇರಿ ದ್ಯಾಮಣ್ಣರ ಸನ್ಮಾನಿಸಿದರು.

ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಚ್ಚದೆಯ ಅಕ್ಕ ಅನು ತಂಡವು ಶ್ರಮಿಸುತ್ತಿದೆ. ದೂರ ದೂರದ ಊರುಗಳಿಗೆ ತೆರಳಿ ಆಕರ್ಷಕ ವಾತಾವರಣ ನಿರ್ಮಿಸುತ್ತಿದೆ. ಅದರಂತೆ ಗದಗ್‌ನಿಂದ ಬಂದು ಇಲ್ಲಿನ ಶಾಲೆಗೆ ಬಣ್ಣ ಬಳಿದಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಬೇಕು. ಇದಕ್ಕೆ ಮಕ್ಕಳ ದಾಖಲಾತಿ ಹೆಚ್ಚಿಸಿ, ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು. ನಮ್ಮ ತಂಡವು ವಿಶೇಷ ಅಭಿಯಾನವನ್ನು ಶೋಕಿಗಾಗಿ ಇಲ್ಲವೇ ಹೆಸರು ಗಳಿಕೆಗಾಗಿ ಕೈಗೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಶಿಕ್ಷಣದಿಂದ ವಂಚಿತರಾದವರನ್ನು ಬೇಗ ಮದುವೆ ಮಾಡಿ ಕಳುಹಿಸುವುದು, ನಿರುದ್ಯೋಗಿಗಳನ್ನು ಕಷ್ಟವನ್ನು ಕಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣತೊಡಲಾಯಿತು ಎಂದು ಕೆಚ್ಚೆದೆಯ ಅನು ಅಕ್ಕ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net