ಸ್ಟೆತೋಸ್ಕೋಪ್ ಬಿಟ್ಟು ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕಿಳಿದ ಸರ್ಕಾರಿ ವೈದ್ಯರು

mng-nov10-sports
Published on

ಮಂಗಳೂರು: ಪ್ರತಿ ದಿನ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವ ವೈದ್ಯರು ಮೈದಾನಕ್ಕಿಳಿದಿದ್ದರು. ಸ್ಟೆತೋಸ್ಕೋಪ್ ಬದಲಿಗೆ ಕೈಯ್ಯಲ್ಲಿ ಬ್ಯಾಟ್, ಬಾಲ್ ಹಿಡಿದಿದ್ದರು. ಪಂದ್ಯಾವಳಿಯಲ್ಲಿ ಪಾಲ್ಗೊಂಡು ಗೆಲ್ಲುವ ಉತ್ಸಾಹವಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದವರು ಪರಸ್ಪರ ಪರಿಚಯಿಸಿಕೊಂಡು ಆತ್ಮೀಯ ಕ್ಷಣಗಳನ್ನು ಕಳೆದರು.


ನೆಹರೂ ಮೈದಾನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ದ.ಕ ಜಿಲ್ಲಾ ಶಾಖೆಯ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಪುರುಷ ಸರ್ಕಾರಿ ವೈದ್ಯಾಧಿಕಾರಿಗಳ ಟೆನ್ನಿಸ್‌ಬಾಲ್ ಕ್ರಿಕೆಟ್ ಮತ್ತು ಮಹಿಳಾ ಸರ್ಕಾರಿ ವೈದ್ಯಾಧಿಕಾರಿಗಳ ತ್ರೋಬಾಲ್ ಪಂದ್ಯಾಟದಲ್ಲಿ ಕಂಡು ಬಂದ ದೃಶ್ಯ.


ಬ್ಯಾಂಕ್ ಆ್ ಬರೋಡ ಜನರಲ್ ಮ್ಯಾನೇಜರ್ ರವೀಂದ್ರ ರೈ ಅವರು ಕ್ರೀಡಾಕೂಟ ಉದ್ಘಾಟಿಸಿದರು. ಸರ್ಕಾರಿ ವೈದ್ಯರು ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವುದು ಹೊಸ ಅನುಭವ ನೀಡಲಿದೆ ಎಂದರು.


ಜಿಲ್ಲಾ ಆರೋಗ್ಯಾಕಾರಿ ಡಾ.ಎಚ್.ಆರ್.ತಿಮ್ಮಯ್ಯ, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಸದಾಶಿವ ಶಾನುಭಾಗ್, ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್, ಜಿಲ್ಲಾ ಆರೋಗ್ಯ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್, ರೋಗವಾಹಕ ಆಶ್ರಿತ ರೋಗಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಮೊದಲಾದವರಿದ್ದರು. ಸಂಘದ ರಾಜ್ಯಾಧ್ಯಕ್ಷ ಡಾ.ವಿವೇಕ್ ದೊರೈ, ಚುನಾಯಿತ ಅಧ್ಯಕ್ಷ ಡಾ.ತಿಮ್ಮರಾಜು ಮತ್ತು ಕಾರ್ಯದರ್ಶಿ ಡಾ.ಚಂದ್ರಮೋಹನ್ ಮೊದಲಾದವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.


ಸಂಘದ ದ.ಕ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ದೀಪಕ್ ರೈ ಸ್ವಾಗತಿಸಿದರು. ಡಾ.ವಿಶ್ವೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. 17 ಜಿಲ್ಲೆಯಿಂದ ಕ್ರಿಕಟ್ ಮತ್ತು 7 ಥ್ರೋಬಾಲ್ ತಂಡಗಳು ಭಾಗವಹಿಸಿವೆ. ಸುಮಾರು 400 ಸರ್ಕಾರಿ ವೈದ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net