ಉಣಕಲ್ಲನಲ್ಲಿ ಗೌರಿ ಪೂಜೆ

Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಓಂನಗರದಲ್ಲಿ ಗೌರಿ ಹುಣ್ಣಿಮೆ ಅಂಗವಾಗಿ ವಿಶೇಷ ಆಚರಣೆ ಮಾಡಲಾಯಿತು.

ಚನ್ನಬಸಪ್ಪ ಧಾರವಾಡಶೆಟ್ಟರ್ ಇವರ ನಿವಾಸದಲ್ಲಿ ಸಾಂಪ್ರದಾಯಕವಾಗಿ ಗೌರಿ ಹಬ್ಬ ಆಚರಿಸಲಾಯಿತು. ಗೌರಿ ಪೂಜೆಯನ್ನು ಭಕ್ತಿ ಹಾಗೂ ಸಂಭ್ರಮದಿಂದ ನೆರವೇರಿಸಲಾಯಿತು.

ಸುತ್ತಮುತ್ತಲಿನ ವಾಯುಪುತ್ರ ಬಡಾವಣೆ, ಸಾಯಿನಗರ, ಜ್ಯೋತಿ ಕಾಲನಿ, ಸಿದ್ದ ಕಲ್ಯಾಣ ನಗರ, ಟೀಚರ್ಸ್ ಕಾಲನಿ ಮಹಿಳೆಯರು ಸಾಂಪ್ರದಾಯಕ ಸಕ್ಕರೆ ಆರತಿಗಳೊಂದಿಗೆ ಆಗಮಿಸಿ ಗೌರಿ ಮೂರ್ತಿಗೆ ಬೆಳಗಿದರು.

ಗೌರಿ ಹಬ್ಬದ ಕುರಿತು ಭಕ್ತಿಪದಗಳನ್ನು ಹಾಡಿ ಜಾನಪದ ಸೊಗಡು ನೆನಪಿಸಿದರು. ಮಹಿಳೆಯರು ಮಕ್ಕಳೊಂದಿಗೆ ಬಂದು ಹಬ್ಬಕ್ಕೆ ಮೆರಗು ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net