ಪುತ್ತೂರು: ರಿಕ್ಷಾದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋವನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯಂತೆ ಪೊಲೀಸರು ದರ್ಬೆ ಬೈಪಾಸ್ ರಸ್ತೆಯಲ್ಲಿ ದಾಳಿ ನಡೆಸಿ, ಗೋವನ್ನು ರಕ್ಷಿಸಿ ರಿಕ್ಷಾ ಚಾಲಕ ಮತ್ತು ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರನ್ನು ಬಂಽಸಿದ್ದಾರೆ.
ಬನ್ನೂರು ನಿವಾಸಿಗಳಾದ ಆಟೋರಿಕ್ಷಾ ಚಾಲಕ ಇಬ್ರಾಹಿಂ, ರೆಹಮತ್, ಸಫಿಯಾ ಪರವಾನಗಿ ಇಲ್ಲದೆ ಗೋವನ್ನು ಅಕ್ರಮ ಮತ್ತು ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಽತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಽಸಲಾಗಿದೆ.
ಅಪಾಯಕಾರಿ ಸ್ಥಿತಿಯಲ್ಲಿ ಗೋವನ್ನು ರಿಕ್ಷಾದಲ್ಲಿ ತೆಗೆದುಕೊಂಡು ಹೋಗುತ್ತಿದ್ದುದನ್ನು ಬಜರಂಗದಳದ ಕಾರ್ಯಕರ್ತರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದರ್ಬೆ ಬೈಪಾಸ್ ರಸ್ತೆ ಸರ್ವಿಸ್ ಸ್ಟೇಷನ್ ಬಳಿ ಆಟೋರಿಕ್ಷಾವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಹಸುವೊಂದನ್ನು ರಿಕ್ಷಾದಲ್ಲಿ ಹಿಂಸಾತ್ಮಕವಾಗಿ ಇರಿಸಿರುವುದು ಕಂಡುಬಂದಿದೆ. ವಿಚಾರಣೆ ನಡೆಸಿದಾಗ ಮುಂಡೂರಿನಿಂದ ಬನ್ನೂರಿಗೆ ಕೊಂಡೊಯ್ಯುವುದಾಗಿ ರಿಕ್ಷಾ ಚಾಲಕ ತಿಳಿಸಿದ್ದಾನೆ. ಗೋ ಸಾಗಾಟಕ್ಕೆ ಯಾವುದೇ ಅನುಮತಿ ಇರದ ಕಾರಣದಿಂದ ರಿಕ್ಷಾದಲ್ಲಿದ್ದವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.