ಗೋ ರಕ್ಷಣೆಯಿಂದ ಗೋದಾನದ ಪುಣ್ಯ: ಆನೆಗುಂದಿ ಶ್ರೀ ಆಶೀರ್ವಚನ

gou new
Published on

ಬ್ರಹ್ಮಾವರ: ಒಂದು ಗೋವು ಕಸಾಯಿಖಾನೆಗೆ ಹೋಗುವುದನ್ನು ಉಳಿಸಿದರೆ ನೂರು ಗೋದಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಹೇಳಿದರು.

ಆರೂರು ಪುಣ್ಯಕೋಟಿ ಗೋಸೇವಾ ಕೇಂದ್ರದಲ್ಲಿ ಭಾನುವಾರ ಜರುಗಿದ ಗೋ ಕಥಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ದಿನದಲ್ಲಿ ಗೋವುಗಳನ್ನು ಮನೆಯಲ್ಲಿ ಸಾಕುವ ಕೆಲಸ ಎಲ್ಲರಿಗೂ ಅಸಾಧ್ಯ. ಆದರೆ ಗೋಶಾಲೆಯ ಗೋವುಗಳನ್ನು ಪಾಲನೆ ಪೋಷಣೆ ಮಾಡುವವರಿಗೆ ನೆರವು ನೀಡಿದಲ್ಲಿ ನೂರು ಗೋದಾನದ ಪುಣ್ಯ ಲಭಿಸುತ್ತದೆ ಎಂದರು.

ನ.16ರಿಂದ ನ.22ರ ತನಕ ಪ್ರತಿದಿನ ಸಂಜೆ ಶ್ರೀ ಭಕ್ತಿ ಭೂಷಣದಾಸ್ ಅವರಿಂದ ಗೋ ಕಥಾ ಕಾಲಕ್ಷೇಪ ಜರುಗಿತು. ಭಾನುವಾರ ಗೋ ಸೂಕ್ತ ಹೋಮ ಜರುಗಿತು. ದೇಶಿ ಹಸುಗಳನ್ನು ಪಾಲನೆ ಪೋಷಣೆ ಮಾಡುವ 3 ಮಂದಿಯನ್ನು ಗುರುಗಳು ಸನ್ಮಾನಿಸಿದರು.

ಅಯೋಧ್ಯೆಯ ಯೋಗಿ ಸತ್ಯೇಂದ್ರನಾಥ್ ಗುರೂಜಿ, ಮಥುರೆಯ ಬ್ರಿಜೇಶ್ ಗೋಸ್ವಾಮಿ, ಪಂಡರಾಪುರದ ಶ್ರವಣ್ ಭಕ್ತಿ ದಾಸ್ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಆನಂದ ಅಮೀನ ಮಲ್ಪೆ, ಗಣೇಶ್ ನಾಯಕ್ ಇನ್ನಿತರ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net